ಟೀಮ್ ಇಂಡಿಯಾದ ವೇಳಾಪಟ್ಟಿ ಪ್ರಕಟ: 5 ಟೆಸ್ಟ್, 3 ಏಕದಿನ, 8 ಟಿ20 ಪಂದ್ಯ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮುಂಬರುವ ಸರಣಿಗಾಗಿ ಟೀಮ್ ಇಂಡಿಯಾದ ವೇಳಾಪಟ್ಟಿ ಪ್ರಕಟವಾಗಿದ್ದು, 2023 ರಿಂದ 2024 ರ ಮಾರ್ಚ್​ವರೆಗೆ ಭಾರತ ತಂಡವು ಒಟ್ಟು 16 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಲಿದೆ. ಇದರಲ್ಲಿ 5 ಟೆಸ್ಟ್, 3 ಏಕದಿನ ಮತ್ತು 8 ಟಿ20 ಪಂದ್ಯಗಳು ಒಳಗೊಂಡಿವೆ.

2024 ರ ಜನವರಿ 25 ರಂದು ಪ್ರಾರಂಭವಾಗುವ ಐದು ಪಂದ್ಯಗಳ ಟೆಸ್ಟ್ ಸರಣಿಗಾಗಿ ಇಂಗ್ಲೆಂಡ್‌ ತಂಡವು ಭಾರತಕ್ಕೆ ಬರಲಿದೆ. ಈ ಸರಣಿಯ ಪಂದ್ಯಗಳು ಹೈದರಾಬಾದ್, ವೈಜಾಗ್, ರಾಜ್‌ಕೋಟ್, ರಾಂಚಿ ಮತ್ತು ಧರ್ಮಶಾಲಾದಲ್ಲಿ ನಡೆಯಲಿದೆ.

ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧ 3 ಪಂದ್ಯಗಳ ಏಕದಿನ ಸರಣಿ ಆಡಲಿದೆ. ಈ ಪಂದ್ಯಗಳಿಗೆ ಮೊಹಾಲಿ, ಇಂದೋರ್ ಮತ್ತು ರಾಜ್‌ಕೋಟ್‌ನ ಮೈದಾನಗಳು ಆತಿಥ್ಯವಹಿಸಲಿದೆ.ಭಾರತವು ಆಸ್ಟ್ರೇಲಿಯಾ ವಿರುದ್ಧ ಐದು ಪಂದ್ಯಗಳ ಟಿ20 ಸರಣಿಯನ್ನು ಸಹ ಆಡಲಿದೆ. ನವೆಂಬರ್ 23 ರಂದು ವೈಜಾಗ್‌ನಲ್ಲಿ ಆರಂಭವಾಗಲಿರುವ ಈ ಸರಣಿಯು ಡಿಸೆಂಬರ್ 3 ರಂದು ಹೈದರಾಬಾದ್‌ನಲ್ಲಿ ಮುಕ್ತಾಯಗೊಳ್ಳಲಿದೆ.

ಹೊಸ ವರ್ಷದ ಆರಂಭದಲ್ಲಿ ಅಫ್ಘಾನಿಸ್ತಾನವು ತಮ್ಮ ಚೊಚ್ಚಲ ವೈಟ್ ಬಾಲ್ ದ್ವಿಪಕ್ಷೀಯ ಸರಣಿಗಾಗಿ ಭಾರತಕ್ಕೆ ಆಗಮಿಸಲಿದೆ. ಮೂರು ಪಂದ್ಯಗಳ ಈ ಟಿ20 ಸರಣಿಯು ಮೊಹಾಲಿ ಮತ್ತು ಇಂದೋರ್‌ನಲ್ಲಿ ನಡೆಯಲಿದ್ದು, ಹಾಗೆಯೇ 3ನೇ ಪಂದ್ಯ ಬೆಂಗಳೂರಿನಲ್ಲಿ ನಡೆಯಲಿದೆ.

ಭಾರತ vs ಆಸ್ಟ್ರೇಲಿಯಾ ಏಕದಿನ ಸರಣಿ:

ಮೊದಲ ಏಕದಿನ ಪಂದ್ಯ (ಮೊಹಾಲಿ – ಸೆಪ್ಟೆಂಬರ್ 22, 2023)
ಎರಡನೇ ಏಕದಿನ ಪಂದ್ಯ (ಇಂದೋರ್ – ಸೆಪ್ಟೆಂಬರ್ 24, 2023)
ಮೂರನೇ ಏಕದಿನ ಪಂದ್ಯ (ರಾಜ್‌ಕೋಟ್ – ಸೆಪ್ಟೆಂಬರ್ 27, 2023).

ಭಾರತ vs ಆಸ್ಟ್ರೇಲಿಯಾ ಟಿ20 ಸರಣಿ:

ಮೊದಲ ಟಿ20 ಪಂದ್ಯ (ವೈಜಾಗ್ – ನವೆಂಬರ್ 23, 2023)
ಎರಡನೇ ಟಿ20 ಪಂದ್ಯ (ತಿರುವನಂತಪುರಂ – ನವೆಂಬರ್ 26, 2023)
ಮೂರನೇ ಟಿ20 ಪಂದ್ಯ (ಗುವಾಹಟಿ – ನವೆಂಬರ್ 28, 2023)
ನಾಲ್ಕನೇ ಟಿ20 ಪಂದ್ಯ (ನಾಗ್ಪುರ – ಡಿಸೆಂಬರ್ 1, 2023)
ಐದನೇ ಟಿ20 ಪಂದ್ಯ (ಹೈದರಾಬಾದ್ – ಡಿಸೆಂಬರ್ 03, 2023)

ಅಫ್ಘಾನಿಸ್ತಾನ vs ಭಾರತ:

ಮೊದಲ ಟಿ20 ಪಂದ್ಯ (ಮೊಹಾಲಿ – ಜನವರಿ 11, 2024)
ಎರಡನೇ ಟಿ20 ಪಂದ್ಯ (ಇಂದೋರ್ – ಜನವರಿ 14, 2024)
ಮೂರನೇ ಟಿ20 ಪಂದ್ಯ (ಬೆಂಗಳೂರು – ಜನವರಿ 17, 2024)

ಭಾರತ vs ಇಂಗ್ಲೆಂಡ್:

ಮೊದಲ ಟೆಸ್ಟ್ (ಹೈದರಾಬಾದ್ – ಜನವರಿ 25 – ಜನವರಿ 29, 2024)
ಎರಡನೇ ಟೆಸ್ಟ್ (ವೈಜಾಗ್ – ಫೆಬ್ರವರಿ 02 – ಫೆಬ್ರವರಿ 06, 2024)
ಮೂರನೇ ಟೆಸ್ಟ್ (ರಾಜ್​ಕೋಟ್ – ಫೆಬ್ರವರಿ 15 – ಫೆಬ್ರವರಿ 19, 2024)
ನಾಲ್ಕನೇ ಟೆಸ್ಟ್ (ರಾಂಚಿ – ಫೆಬ್ರವರಿ 23 – ಫೆಬ್ರವರಿ 27, 2024)
ಐದನೇ ಟೆಸ್ಟ್ (ಧರ್ಮಶಾಲಾ – ಮಾರ್ಚ್ 07 – ಮಾರ್ಚ್ 11, 2024)

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!