ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂಬರುವ ಆಗಸ್ಟ್ ತಿಂಗಳಲ್ಲಿ ಭಾರತ ತಂಡವು ಏಕದಿನ ಮತ್ತು ಟಿ20 ಪಂದ್ಯಗಳನ್ನು ಆಡಲು ಬಾಂಗ್ಲಾದೇಶ ಪ್ರವಾಸ ಕೈಗೊಳ್ಳಲಿದೆ ಎಂದು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ತಿಳಿಸಿದೆ.
ಮೊದಲ ಎರಡು ಏಕದಿನ ಪಂದ್ಯಗಳು ಕ್ರಮವಾಗಿ ಆಗಸ್ಟ್ 17 ಮತ್ತು 20ರಂದು ಮೀರ್‌ಪುರ್‌ದ ಶೇರ್–ಇ– ಬಾಂಗ್ಲಾ ಕ್ರೀಡಾಂಗಣದಲ್ಲಿ ನಡೆಯಲಿವೆ. ಮೂರನೇ ಏಕದಿನ ಪಂದ್ಯ ಮತ್ತು ಮೊದಲ ಟಿ20 ಪಂದ್ಯ ಛಟ್ಟೊಗ್ರಾಮ್‌ನಲ್ಲಿ ಆಗಸ್ಟ್ 23 ಮತ್ತು 26ರಂದು ನಡೆಯಲಿದೆ. ಮತ್ತೆ ಢಾಕ್ಕಾಕ್ಕೆ ಮರಳಲಿರುವ ಭಾರತ ತಂಡ ಕೊನೆಯ ಎರಡು ಟಿ20 ಪಂದ್ಯಗಳನ್ನು ಆಗಸ್ಟ್ 29 ಮತ್ತು 31ರಂದು ಮೀರ್‌ಪುರದಲ್ಲಿ ಆಡಲಿದೆ.
ಈ ಪ್ರವಾಸವು ಭಾರತಕ್ಕೆ ಏಷ್ಯಾ ಕಪ್ ಟಿ20 ಟೂರ್ನಿಗೆ ಸಿದ್ಧತೆ ನಡೆಸಲು ನೆರವಾಗಲಿದೆ. ಏಷ್ಯಾ ಕಪ್ ಭಾರತದ ಆತಿಥ್ಯದಲ್ಲಿ ನಡೆಯಬೇಕಿದೆ. ಆದರೆ ಪಾಕಿಸ್ತಾನವು ಭಾರತದಲ್ಲಿ ಆಡದಿರುವ ಕಾರಣ ಈ ಟೂರ್ನಿ ಬೇರೆ ರಾಷ್ಟ್ರದಲ್ಲಿ ನಡೆಯುವುದೇ ಎಂಬುದರ ಬಗ್ಗೆ ಇನ್ನೂ ಖಚಿತವಾಗಿಲ್ಲ.