ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂಗ್ಲೆಂಡ್ ವಿರುದ್ಧ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿದೆ.
ಮೊದಲು ಟೀಂ ಇಂಡಿಯಾ ಬ್ಯಾಟಿಂಗ್ ಮಾಡಿದ್ದು, ಒಟ್ಟಾರೆ 396 ರನ್‌ಗಳನ್ನು ಕಲೆಹಾಕಿತ್ತು. ಬೃಹತ್ ಮೊತ್ತ ಫಾಲೋ ಮಾಡಿದ ಟೀಂ ಇಂಗ್ಲೆಂಡ್ ಬರೋಬ್ಬರಿ 143 ರನ್‌ಗಳ ಹಿನ್ನೆಡೆ ಅನುಭವಿಸಿದೆ.
ಇದೀಗ ಭಾರತ 398 ರನ್‌ಗಳ ಮುನ್ನಡೆ ಕಾಯ್ದುಕೊಂಡಿದೆ. 399 ರನ್‌ಗಳ ಗುರಿಯನ್ನು ಇಟ್ಟುಕೊಂಡು ಎರಡನೇ ಇನ್ನಿಂಗ್ಸ್ ಆರಂಭಿಸಿದ್ದ ಇಂಗ್ಲೆಂಡ್, ನಾಲ್ಕನೇ ದಿನದ ಮಧ್ಯಾಹ್ನದ ವೇಳೆಗೆ ಎಲ್ಲ ವಿಕೆಟ್ಗಳನ್ನು ಕಳೆದುಕೊಂಡು 292 ರನ್ಗಳಿಸಿ ಸೋಲಿಗೆ ಶರಣಾಯ್ತು. ಈ ಮೂಲಕ ಭಾರತ ತಂಡವು 106 ರನ್‌ಗಳ ಭರ್ಜರಿ ಗೆಲುವು ಸಾಧಿಸಿತು.
ತುಂಬಾ ಒಳ್ಳೆಯ ಸುದ್ದಿಯ ಬುತ್ತಿ ಹೊಸ ದಿಗಂತ