ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಿ 20 ವಿಶ್ವಕಪ್ ಟೂರ್ನಿಯ ಭರ್ಜರಿ ಗೆಲುವಿನ ನಂತರ ಇಂದು ಮುಂಜಾನೆ ಟೀಂ ಇಂಡಿಯಾ ದೆಹಲಿ ತಲುಪಿದೆ.
ವಿಮಾನ ನಿಲ್ದಾಣದಿಂದ ವಿಶೇಷ ಬಸ್ನಲ್ಲಿ ಟೀಮ್ ಇಂಡಿಯಾ ಆಟಗಾರರು ದೆಹಲಿಯ ಐಟಿಸಿ ಮೌರ್ಯ ಹೋಟೆಲ್ ತೆರಳಿದರು. ಈ ವೇಳೆ ವಿಶ್ವ ಚಾಂಪಿಯನ್ನರನ್ನು ಸ್ವಾಗತಿಸಲು ಡೋಲು ಡಂಗುರದ ವಿಶೇಷ ವ್ಯವಸ್ಥೆ ಮಾಡಲಾಗಿತ್ತು.
Virat Kohli smiling and Hardik Pandya dancing when they reach India with the Trophy.🥹
– THIS IS BEAUTIFUL. ❤️ pic.twitter.com/1OONnF3zzJ
— Tanuj Singh (@ImTanujSingh) July 4, 2024
ಇತ್ತ ಬಸ್ನಿಂದ ಟೀಮ್ ಇಂಡಿಯಾ ಆಟಗಾರರು ಇಳಿಯುತ್ತಿದ್ದಂತೆ ಡೋಲು ಬಜಾನ ಶುರುವಾಗಿದೆ. ಇದೇ ವೇಳೆ ಟೀಮ್ ಇಂಡಿಯಾ ಆಟಗಾರ ಹಾರ್ದಿಕ್ ಪಾಂಡ್ಯ ಕುಣಿಯಲಾರಂಭಿಸಿದರು. ಆ ಬಳಿಕ ಬಂದ ಸೂರ್ಯಕುಮಾರ್ ಯಾದವ್ ಹಾಗೂ ಯಶಸ್ವಿ ಜೈಸ್ವಾಲ್ ಕೂಡ ಸ್ಟೆಪ್ಸ್ ಹಾಕುವ ಮೂಲಕ ಗಮನ ಸೆಳೆದರು.
Suryakumar Yadav dancing when he arrives in India with the Trophy. ❤️ pic.twitter.com/7ZtcPx36BS
— Tanuj Singh (@ImTanujSingh) July 4, 2024
ಇನ್ನು ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಕೂಡ ಕುಣಿಯುತ್ತಾ ಆಗಮಿಸಿದ್ದು ವಿಶೇಷವಾಗಿತ್ತು. ಹಾಗೆಯೇ ಭಾರತ ತಂಡ ವಿಕೆಟ್ ಕೀಪರ್ ರಿಷಭ್ ಪಂತ್ ಹಾಗೂ ಮೊಹಮ್ಮದ್ ಸಿರಾಜ್ ಕೂಡ ನೃತ್ಯ ಮಾಡುವ ಮೂಲಕ ಸಂಭ್ರಮಿಸಿದರು. ಇದೀಗ ಭಾರತೀಯ ಆಟಗಾರರ ಸಂಭ್ರಮದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಭಾರೀ ಮೆಚ್ಚುಗೆ ಪಡೆದುಕೊಂಡಿದೆ.
Captain Rohit Sharma dancing after reaching India with the Trophy.❤️
– THE HAPPY & PROUD, CAPTAIN RO…!!!! 🏆pic.twitter.com/wbJ0L1GVYO
— Tanuj Singh (@ImTanujSingh) July 4, 2024