ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಬಸ್ ನಿಲ್ದಾಣ ಸಮೀಪ ಎರಡು ತಂಡಗಳು ಹೊಡೆದಾಟ ನಡೆಸಿಕೊಂಡ ಘಟನೆ ಕಳೆದ ರಾತ್ರಿ ನಡೆದಿದೆ.
ಪುತ್ತೂರು ಬಸ್ ನಿಲ್ದಾಣ ಸಮೀಪದ ಗಾಂಧಿಕಟ್ಟೆ ಸಮೀಪ ಹಣ್ಣು ಹಂಪಲು ವಿತರಣೆಯ ಪಿಕಪ್ ವಾಹನದವರು ಮತ್ತು ಮಾರುತಿ 800 ಕಾರಿನ ನಡುವೆ ನಡುರಸ್ತೆಯಲ್ಲೇ ಹೊಡೆದಾಟ ನಡೆದಿದೆ.
ಈ ಘಟನೆಯ ವಿಡಿಯೋ ವೈರಲ್ ಆಗಿದೆ. ಪಿಕಪ್ ವಾಹನದವರ ಮತ್ತು ಕಾರಿನವರ ನಡುವೆ ಹೊಡೆದಾಟ ನಡೆದಿದೆ. ರಾತ್ರಿ 8.45 ಸಮಯಕ್ಕೆ ಮುಖ್ಯ ಪೇಟೆಯಲ್ಲೇ ಹೊಡೆದಾಟ ನಡೆದರೂ ಪೊಲೀಸರ ಪತ್ತೆಯೇ ಇರಲಿಲ್ಲ ಎಂಬ ಆರೋಪ ಸಾರ್ವಜನಿಕರ ವಲಯದಿಂದ ಕೇಳಿ ಬಂದಿದೆ.
ಯಾವ ಕಾರಣಕ್ಕೆ ಈ ಹೊಡೆದಾಟ ನಡೆದಿದೆ ಎನ್ನುವ ಮಾಹಿತಿ ಲಭ್ಯವಾಗಿಲ್ಲ. ಎರಡೂ ಬಣಗಳು ಒಂದೇ ಕೋಮಿಗೆ ಸೇರಿದ್ದಾಗಿದೆ.
ಹೊಡೆದಾಟದಿಂದ ಟ್ರಾಫಿಕ್ ಜಾಮ್
ಹೊಡೆದಾಟ ನಡುರಸ್ತೆಯವರೆಗೂ ತಲುಪಿದಾಗ ಸ್ವಲ್ಪ ಹೊತ್ತು ಟ್ರಾಫಿಕ್ ಜಾಮ್ ಆಗಿದೆ. ನಂತರ ಸ್ಥಳೀಯ ಅಂಗಡಿಯವರು ಬಂದು ಎಚ್ಚರಿಕೆ ಕೊಟ್ಟ ನಂತರ ಎರಡು ತಂಡಗಳು ಜಾಗ ಖಾಲಿ ಮಾಡಿವೆ.