ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದಿನಿಂದ ಆರ್ಥಿಕ ವರ್ಷ ಆರಂಭವಾಗಿದ್ದು, ಸಾಕಷ್ಟು ವಸ್ತುಗಳ ದರ ಏರಿಕೆಯಾಗಿದೆ. ಆರ್ಥಿಕ ಸಂಕಷ್ಟದಿಂದ ಹೊರಬರುವ ಉದ್ದೇಶದೊಂದಿಗೆ ಜಲಮಂಡಳಿಯು ಏಪ್ರಿಲ್ ತಿಂಗಳಿನಿಂದ ಅನ್ವಯವಾಗುವಂತೆ ನೀರು ಬಳಕೆ ಶುಲ್ಕವನ್ನು ಶೇ.3ರಷ್ಟು ಹೆಚ್ಚಿಸಲಿದೆ.
ಪ್ರತೀ ವರ್ಷದಂತೆ ಆರ್ಥಿಕ ಸಮತೋಲನ ಸರಿದೂಗಿಸಲು ನೀರಿನ ಶುಲ್ಕ ಹೆಚ್ಚಳ ಮಾಡಲಾಗಿದೆ. ಈ ತಿಂಗಳು ಬರುವ ಬಿಲ್‌ನಿಂದಲೇ ಹೊಸ ದರ ಅನ್ವಯವಾಗಲಿದೆ.
ಏಪ್ರಿಲ್ ತಿಂಗಳಿನಿಂದ ಗೃಹ ಬಳಕೆದಾರರಿಗೆ ಮಾಸಿಕ ಸರಾಸರಿ 20 ರಿಂದ 30 ರೂ. ಹೆಚ್ಚುವರಿ ನೀರಿನ ಬಿಲ್ ಬರುವ ಸಾಧ್ಯತೆಗಳಿವೆ. ಪರಿಷ್ಕೃತ ದರ ಹಿನ್ನೆಲೆ ಗೃಹ ಬಳಕೆದಾರರಿಗೆ ಸ್ಲ್ಯಾಬ್ ಗಳ ಆಧಾರದಡಿ ಸುಮಾರು ಪ್ರತಿ ಲೀಟರ್ ಗೆ 0.15 ಪೈಸೆಯಿಂದ 1 ಪೈಸೆವರೆಗೆ ಹೆಚ್ಚಳವಾಗಲಿದೆ. ವಾಣಿಜ್ಯ ಬಳಕೆದಾರರಿಗೆ ಪ್ರತಿ ಲೀಟರ್‌ಗೆ 1.90 ಪೈಸೆ ಏರಿಕೆ ಆಗಲಿದೆ.



