ಟೆಕ್‌ವಲಯದಲ್ಲಿ ಮುಂದುವರಿದ ಉದ್ಯೋಗ ಕಡಿತ: 6,600 ಉದ್ಯೋಗಿಗಳನ್ನು ಹೊರಹಾಕಲಿದೆ ಡೆಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಜಾಗತಿಕ ಆರ್ಥಿಕ ಪರಿಸ್ಥಿತಿಗಳಿಂದಾಗಿ ಟೆಕ್‌ವಲಯದಲ್ಲಿ ಉದ್ಯೋಗ ಕಡಿತಗಳು ಮುಂದುವರೆದಿದ್ದು ಇದೀಗ ಪ್ರಸಿದ್ಧ ಕಂಪ್ಯೂಟರ್‌ ಬ್ರ್ಯಾಂಡ್‌ ಡೆಲ್‌ ಈ ಪಟ್ಟಿಗೆ ಹೊಸದಾಗಿ ಸೇರಿಕೊಂಡಿದೆ. ಮಾರುಕಟ್ಟೆ ಪರಿಸ್ಥಿತಿಗಳು ಕಂಪನಿ ಪಾಲಿಗೆ ಆರ್ಥಿಕವಾಗಿ ಹೊಡೆತವನ್ನು ನೀಡಿದ್ದು ಹೀಗಾಗಿ ಕಂಪನಿಯು ತನ್ನ ಒಟ್ಟೂ ಉದ್ಯೋಗಿಗಳಲ್ಲಿ 5 ಸೇಕಡಾ ಅಂದರೆ ಸುಮಾರು 6,600ರಷ್ಟು ಉದ್ಯೋಗಿಗಳನ್ನು ಹೊರಹಾಕಲಿದೆ.

‘ಮಾರುಕಟ್ಟೆಯಲ್ಲಿ ಪಿಸಿಗಳಿಗೆ ಬೇಡಿಕೆ ಗಣನೀಯವಾಗಿ ಕುಸಿದಿದೆ. ಪ್ರತಿಕೂಲಮಾರುಕಟ್ಟೆ ಪರಿಸ್ಥಿತಿಯು ಕಂಪನಿಯನ್ನು ಪ್ರಭಾವಿಸಿದೆ” ಎಂದು ಕಂಪನಿಯ ಕಾರ್ಯನಿರ್ವಾಹಕ ಅಧಿಕಾರಿ ಜೆಫ್ ಕ್ಲಾರ್ಕ್ಹೇಳಿದ್ದು ಕಂಪನಿಯು ವೆಚ್ಚಕಡಿತದ ಭಾಗವಾಗಿ 5 ಶೇಕಡಾ ಉದ್ಯೋಗಿಗಳನ್ನು ಹೊರಹಾಕಲಿದೆ ಎಂದಿದ್ದಾರೆ.

ಕೋವಿಡ್‌ ಸಮಯದಲ್ಲಿ ಏರಿಕೆಯಾಗಿದ್ದ ಪಿಸಿಗಳ ಬೇಡಿಕೆಯು ಕೋವಿಡ್‌ ಪೂರ್ವ ಕಾಲಘಟ್ಟದಲ್ಲಿ ಗಣನೀಯವಾಗಿ ಕುಸಿದಿದೆ. 2022 ರ ನಾಲ್ಕನೇ ತ್ರೈಮಾಸಿಕದಲ್ಲಿ ವೈಯಕ್ತಿಕ ಕಂಪ್ಯೂಟರ್ ಸಾಗಣೆಗಳು ತೀವ್ರವಾಗಿ ಕುಸಿದಿವೆ. ಎಂದು ಪ್ರಾಥಮಿಕ ಡೇಟಾ ತೋರಿಸುತ್ತದೆ ಎಂದು ಉದ್ಯಮ ವಿಶ್ಲೇಷಕ IDC ಹೇಳಿದೆ. ತನ್ನ ಒಟ್ಟಾರೆ ಆದಾಯದಲ್ಲಿ ಅರ್ಧಕ್ಕಿಂತ ಹೆಚ್ಚಿನ ಪಾಲನ್ನು ಪಿಸಿಗಳಿಂದಲೇ ಗಳಿಸೋ ಡೆಲ್‌ ಕಂಪನಿಯು 2022ರಲ್ಲಿ ಪಿಸಿಗಳ ಬೇಡಿಕೆಯಲ್ಲಿ 37 ಶೇಕಡಾದಷ್ಟು ಕುಸಿತವನ್ನು ಕಂಡಿದೆ.

ಹೀಗಾಗಿ ಕಂಪನಿಯು ಆರ್ಥಿಕ ಹಿನ್ನೆಡೆಗೆ ಅನುಗುಣವಾಗಿ ತನ್ನನ್ನು ಮರುಹೊಂದಿಸಿಕೊಳ್ಳುತ್ತಿದ್ದು ಅದರ ಭಾಗವಾಗಿ 6,600 ಉದ್ಯೋಗಿಗಳನ್ನು ಹೊರಹಾಕಲಿದೆ ಎಂದು ಮೂಲಗಳು ವರದಿ ಮಾಡಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!