ಇಂದಿನ ಡಿಜಿಟಲ್ ಬದುಕಿನಲ್ಲಿ ಗೂಗಲ್, ಅಪ್ಲಿಕೇಶನ್, ವೆಬ್‌ಸೈಟ್‌ಗಳನ್ನ ನಾವು ನಂಬಿಕೆ ಜೊತೆ ಬಳಸುತ್ತೇವೆ. “ಇದು ಎಲ್ಲರಿಗೂ ಗೊತ್ತಿರುವ ಸೈಟ್, ಏನಾಗಲ್ಲ” ಅನ್ನೋ ಭಾವನೆ ಸಾಮಾನ್ಯ. ಆದರೆ ಇದೇ ಅಜಾಗರೂಕತೆಯನ್ನೇ ಸೈಬರ್ ಅಪರಾಧಿಗಳು ಅಸ್ತ್ರವನ್ನಾಗಿ ಬಳಸುತ್ತಾರೆ. ನಿಮ್ಮ ಗಮನಕ್ಕೆ ಬಾರದಂತೆ ಫೋನ್, ಲ್ಯಾಪ್‌ಟಾಪ್‌ಗೆ ನುಗ್ಗುವ ಮಾಲ್‌ವೇರ್‌ಗಳು ಹಣ, ಮಾಹಿತಿ, ಗೌಪ್ಯತೆ ಎಲ್ಲವನ್ನೂ ಕಸಿದುಕೊಳ್ಳಬಲ್ಲವು. ಅದಕ್ಕಾಗಿ ಮಾಲ್‌ವೇರ್ ಏನು, ಅದು ಹೇಗೆ ಹರಡುತ್ತದೆ ಮತ್ತು ಅದರಿಂದ ಸುರಕ್ಷಿತವಾಗಿರುವುದು ಹೇಗೆ ಎಂಬುದನ್ನು ತಿಳಿದುಕೊಳ್ಳುವುದು ಅತ್ಯಗತ್ಯ.
ಮಾಲ್‌ವೇರ್ ಎಂದರೇನು?
ಮಾಲ್‌ವೇರ್ ಎನ್ನುವುದು ದುರುದ್ದೇಶದಿಂದ ತಯಾರಿಸಲಾದ ಸಾಫ್ಟ್‌ವೇರ್. ಇದು ಸ್ಮಾರ್ಟ್‌ಫೋನ್, ಕಂಪ್ಯೂಟರ್, ಟ್ಯಾಬ್‌ಗಳಲ್ಲಿ ಪ್ರವೇಶಿಸಿ ಡೇಟಾ ಕದಿಯುವುದು, ಡಿವೈಸ್ ನಿಧಾನಗೊಳಿಸುವುದು, ನಿಮ್ಮ ಹೆಸರಿನಲ್ಲಿ ಫೇಕ್ ಇಮೇಲ್‌ಗಳು ಹೋಗುವಂತೆ ಮಾಡುವುದು ಮುಂತಾದ ಹಾನಿ ಮಾಡುತ್ತದೆ.
ಸಾಮಾನ್ಯ ಮಾಲ್‌ವೇರ್ ಪ್ರಕಾರಗಳು
ವೈರಸ್ ಡೇಟಾ ಹಾನಿ ಮಾಡುತ್ತದೆ, ವರ್ಮ್ ಇತರೆ ಡಿವೈಸ್‌ಗಳಿಗೆ ತಾನೇ ಹರಡುತ್ತದೆ, ಸ್ಪೈವೇರ್ ನಿಮ್ಮ ಖಾಸಗಿ ಮಾಹಿತಿಯ ಮೇಲೆ ನಿಗಾ ಇಡುತ್ತದೆ, ಅಡ್ವೇರ್ ಅನಗತ್ಯ ಜಾಹೀರಾತು ತೋರಿಸುತ್ತದೆ, ಟ್ರೋಜನ್ ಹಾರ್ಸ್ ನಂಬಿಕೆಯಂತೆ ಕಾಣಿಸಿಕೊಂಡು ಒಳಗಿನಿಂದ ದಾಳಿ ಮಾಡುತ್ತದೆ.
ಮಾಲ್‌ವೇರ್ ಹೇಗೆ ಹರಡುತ್ತದೆ?
ಉಚಿತ ಸಾಫ್ಟ್‌ವೇರ್ ಡೌನ್‌ಲೋಡ್, ನಕಲಿ ಅಪ್ಲಿಕೇಶನ್, ಹಾನಿಗೊಳಗಾದ ವೆಬ್‌ಸೈಟ್, ಫೇಕ್ popup ಮೆಸೇಜ್, ಇಮೇಲ್ ಅಟ್ಯಾಚ್‌ಮೆಂಟ್‌ಗಳ ಮೂಲಕ ಮಾಲ್‌ವೇರ್ ಸುಲಭವಾಗಿ ಪ್ರವೇಶಿಸುತ್ತದೆ.
ಮಾಲ್‌ವೇರ್‌ನಿಂದ ರಕ್ಷಿಸಿಕೊಳ್ಳುವ ಸರಳ ಮಾರ್ಗಗಳು
ನಿಮ್ಮ ಡಿವೈಸ್ ಮತ್ತು ಸಾಫ್ಟ್‌ವೇರ್‌ಗಳನ್ನು ಸದಾ ಅಪ್‌ಡೇಟ್ ಇಡಿ. ಅಜ್ಞಾತ ಲಿಂಕ್‌ಗಳು, popupಗಳಿಗೆ ಕ್ಲಿಕ್ ಮಾಡಬೇಡಿ. ನಂಬಿಕೆಯ ಮೂಲದಿಂದಲೇ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ. ಫೈಲ್ ಶೇರ್ ಮಾಡುವುದನ್ನು ನಿಯಂತ್ರಿಸಿ. ವಿಶ್ವಾಸಾರ್ಹ ಆಂಟಿವೈರಸ್ ಬಳಸಿ.
ಒಂದು ತಪ್ಪು ಕ್ಲಿಕ್ ನಿಮ್ಮ ಬ್ಯಾಂಕ್ ಖಾತೆಯನ್ನೇ ಖಾಲಿ ಮಾಡಬಹುದು. ಡಿಜಿಟಲ್ ಜಗತ್ತಿನಲ್ಲಿ ಜಾಗ್ರತೆ ಇದ್ದರೆ ಮಾತ್ರ ಸುರಕ್ಷತೆ.(Disclaimer: ಈ ಲೇಖನವು ಅಂತರ್ಜಾಲ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ.)



