ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಹೈದರಾಬಾದ್‌ನ ಸಾಫ್ಟ್‌ವೇರ್ ಎಂಜಿನಿಯರ್ ಮದುವೆಯಾದ 6 ತಿಂಗಳಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಹೈದರಾಬಾದ್‌ನ ರಾಯದುರ್ಗಂ ನಿವಾಸಿ ದೇವಿಕಾ (35) ನೇಣಿಗೆ ಶರಣಾಗಿರುವ ಟೆಕ್ಕಿ.
ಹೈಟೆಕ್ ಸಿಟಿಯ ಟೆಕ್ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದ ದೇವಿಕಾ. ಮಾ. 2ರಂದು ರಾತ್ರಿ ಹೈದರಾಬಾದ್‌ನ ತಮ್ಮ ಮನೆಯಲ್ಲಿ ದೇವಿಕಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆರು ತಿಂಗಳ ಹಿಂದೆ ಗೋವಾದಲ್ಲಿಸತೀಶ್ ಎಂಬಾವರ ಜೊತೆ ಮದುವೆ ನಡೆದಿದ್ದು, ಮದುವೆಯ ಬಳಿಕ ದಂಪತಿ ರಾಯದುರ್ಗಂನಲ್ಲಿರುವ ಅಪಾರ್ಟ್ಮೆಂಟ್ ಸ್ಥಳಾಂತರಗೊoಡಿದ್ದರು. ಇಬ್ಬರೂ ಸಣ್ಣಪುಟ್ಟ ವಿಚಾರಗಳಿಗೂ ಜಗಳವಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಮದುವೆಯ ನಂತರ ಸತೀಶ್ ವರದಕ್ಷಿಣೆಗಾಗಿ ದೇವಿಕಾಳಿಗೆ ದೈಹಿಕ ಹಾಗೂ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದನು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಘಟನಾ ಸ್ಥಳಕ್ಕೆ ಆಗಮಿಸಿದ ರಾಯದುರ್ಗಂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.