ಹೊಸದಿಗಂತ ಡಿಜಿಟಲ್ ಡೆಸ್ಕ್:
ಆರ್‌ಟಿಪಿಎಸ್ ವಿದ್ಯುತ್ ಸ್ಥಾವರಗಳಲ್ಲಿ ತಾಂತ್ರಿಕ ಸಮಸ್ಯೆಯಿಂದ ನಾಲ್ಕು ವಿದ್ಯುತ್ ಘಟಕಗಳು ಸ್ಥಗಿತಗೊಂಡಿವೆ.
ರಾಯಚೂರಿನ ಶಕ್ತಿನಗರದಲ್ಲಿರುವ ಆರ್‌ಟಿಪಿಎಸ್ ಘಟಕಗಳಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಎಂಟು ಘಟಕಗಳ ಪೈಕಿ ನಾಲ್ಕು ಘಟಕಗಳು ಸ್ಥಗಿತಗೊಂಡಿವೆ. ಎರಡು ದುರಸ್ತಿಯಲ್ಲಿವೆ. ಸರ್ಕಾರದ ಶೇ.40ರಷ್ಟು ವಿದ್ಯುತ್ ಪೂರೈಸುವ ನಾಲ್ಕು ಆರ್ ಟಿಪಿಎಸ್ ಜನರೇಟರ್ ಗಳು ಕಳೆದೆರಡು ದಿನಗಳಿಂದ ಸೇವೆ ಸ್ಥಗಿತಗೊಳಿಸಿವೆ. ಸೋರುತ್ತಿರುವ ಬಾಯ್ಲರ್ ಪೈಪ್ ಮತ್ತು ಬಂಕರ್ ಸಮಸ್ಯೆಗಳಿಂದಾಗಿ ಅದನ್ನು ಮುಚ್ಚಲಾಗಿದೆ.
ಸದ್ಯ 2 ಮತ್ತು 6ನೇ ಘಟಕಗಳಲ್ಲಿ ದುರಸ್ತಿ ಕಾರ್ಯ ನಡೆಯುತ್ತಿದ್ದು, ಆರ್‌ಟಿಪಿಎಸ್‌ನ ವಿದ್ಯುತ್ ಉತ್ಪಾದನಾ ಸಾಮರ್ಥ್ಯ 1720 ಮೆಗಾವ್ಯಾಟ್ ಆಗಿದೆ. ನಾಲ್ಕು ಬ್ಲಾಕ್ ಗಳನ್ನು ಮುಚ್ಚುವುದರಿಂದ 903 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗಲಿದೆ.