ತಂತ್ರಜ್ಞಾನ ಬಳಕೆ ಹೆಚ್ಚಾಗಿ ಯೋಗದಿಂದ ದೂರ ಉಳಿದ ಜನ: ಶಟಕಾರ

ಹೊಸದಿಗಂತ ವರದಿ ಬೀದರ್:

ತಂತ್ರಜ್ಞಾನ ಬಳಿಕೆಯಿಂದ ಇಂದು ಶ್ರಮವಂತಿಕೆ ಕಡಿಮೆಯಾಗಿ ದೈಹಿಕ ಸಾಮಥ್ರ್ಯ ಕುಂದುತ್ತಿದ್ದು, ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದು ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆ ಅಡಳಿತ ಮಂಡಳಿ ಸದಸ್ಯ ಚಂದ್ರಕಾಂತ ಶಟಕಾರ ಅಭಿಪ್ರಾಯ ಪಟ್ಟರು.

ಮಂಗಳವಾರ ನಗರದ ಹೈದ್ರಾಬಾದ್ ರಸ್ತೆಯಲ್ಲಿರುವ ಕರ್ನಾಟಕ ಕಲಾ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಅವರಣದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ಉದ್ದೇಶಿಸಿ ಮಾತನಡಿದರು.
ಹಿಂದೆ ನಮ್ಮ ಪೂರ್ವಜರು ಬೆಳಿಗ್ಗೆ ಎದ್ದು ಹೊಲದಲ್ಲಿ ಕೆಲಸ ಮಾಡುವುದು, ಬೀಸುವುದು, ಕುಟ್ಟುವುದು, ಎಣ್ಣೆ ತೆಗೆಯುವುದು, ರಾಶಿ ಮಾಡುವುದು ಇತ್ಯಾದಿ ಶ್ರಮ ಹಾಕಿ ಕೆಲಸ ಮಾಡುತ್ತಿದ್ದರು. ಇದರಿಂದ ಅವರ ದೈಹಿಕ ವಿಕಾಸದ ಜೊತೆಗೆ ಆರೋಗ್ಯ ಬಲಿಷ್ಟವಾಗಿರುತ್ತಿತ್ತು. ತಂತ್ರಜ್ಞಾನಸ ಪ್ರಭಾವದಿಂದ ಇಂದು ದೈಹಿಕ ಚಟುವಟಿಕೆ ಕುಂಠಿತಗೊಳ್ಳುತ್ತಿದೆ. ಮೊಬೈಲ್ ಬಳಿಕೆ, ವಿಡಿಯೋ ಗೇಮ್‍ಗಳು ಶ್ರಮರಹಿತವಾಗಿದ್ದು, ಇದು ಮಾನಸಿಕ ಖಿನ್ನತೆಗೂ ಕಾರಣವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಯೋಗ ಹಾಗೂ ಯೋಗಾಸನಗಳು ಮನುಷ್ಯನ ಶಾರೀರಿಕ ಹಾಗೂ ಮಾನಸಿಕ ವಿಕಾಸಕ್ಕೂ ಕಾರಣವಾಗುತ್ತದೆ, ವಿದ್ಯಾರ್ಥಿ ದೆಸೆಯಲ್ಲಿ ನಿತ್ಯ ಯೋಗ ಮಾಡುವುದರಿಂದ ಬುದ್ದಿಶಕ್ತಿ ಚುರುಕಾಗುತ್ತದೆ, ಉತ್ಸಾಹ ಹಾಗೂ ಧನಾತ್ಮಕ ಚಿಂತನೆಗೂ ಯೋಗ ಪುಷ್ಟಿ ನೀಡುತ್ತದೆ ಎಂದರು.

ಸಂಸ್ಥೆಯ ಜಂಟಿ ಕಾರ್ಯದರ್ಶಿ ಸತೀಶ ಪಾಟೀಲ ಮಾತನಾಡಿ, ಆರೋಗ್ಯ ಹಾಗೂ ಮಾನಸಿಕ ಬೆಳವಣಿಗೆಗೆ ಯೋಗಾಸನಗಳು ಜರೂರಿ ಇದ್ದು, ಭಾರತದ ಕೀರ್ತಿ ಪತಾಕೆಯನ್ನು ಇಂದು ಪ್ರಧಾನಿ ನರೇಂದ್ರ ಮೋದಿಜಿಯವರಯ ವಿಶ್ವಸಂಸ್ಥೆಯ ಕಚೇರಿಯಲ್ಲಿ ಯೋಗ ದಿನಾಚರಣೆ ಆಚರಿಸುತ್ತಿರುªರು. ಇಂದಿನ ಈ ಅವಿಸ್ಮರಣಿಯ ಕಾರ್ಯಕ್ಕೆ ನಾವೆಲ್ಲ ಹೆಮ್ಮೆಡ ಪಡಬೇಕೆಂದು ತಿಳಿಸಿದರು.

ಕಾಲೇಜಿನ ಪ್ರಾಚಾರ್ಯರಾದ ಡಾ.ಮಲ್ಲಿಕಾರ್ಜುನ್ ಹಂಗರಗಿ ಮಾತನಾಡಿ, ಯೋಗ ಜೀವನದ ಒಂದು ಭಾಗವಾಗಬೇಕು. ಇದು ವಿದ್ಯಾರ್ಥಿ ದೆಸೆಯಲ್ಲಿ ಶೈಕ್ಷಣಿಕ ವಿಕಾಸಕ್ಕೂ ಕಾರಣವಾಗುತ್ತದೆ. ಉಲ್ಲಾಸ ಹಾಗೂ ಉನ್ನತಿ ಎರಡು ಯೋಗದಿಂದ ಸಾಧ್ಯ. ಆದ್ದರಿಂದ ಇದು ಕೇವಲ ಒಂದು ದಿನದ ಕಾರ್ಯವಾಗದೇ ದೈನಂದಿನ ಕೃತಿಯಾಗಬೇಕೆಂದು ಕರೆ ಕೊಟ್ಟರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ಸಿದ್ರಾಮ ಪಾರಾ, ಅಡಳಿತ ಮಂಡಳಿ ಸದಸ್ಯರಾದ ಮಹೇಶ ಭದಬದೆ, ರವಿ ಹಾಲಳ್ಳಿ, ಶಿವಶಂಕರ ಶಟಕಾರ, ನ್ಯಾಸ ಕಾರ್ಯದರ್ಶಿ ಮಡಿವಾಳಪ್ಪ ಗಂಗಶೆಟ್ಟಿ, ಮಹಿಳಾ ಪ್ರಥಮ ದರ್ಜೆ ಮಹಾವಿದ್ಯಾಲಯದ ಪ್ರಾಚಾರ್ಯ ಮನೋಜಕುಮಾರ ಹಾಗೂ ಇತರರು ಕಾರ್ಯಕ್ರಮದಲ್ಲಿದ್ದರು.

ಬಿ.ವಿ.ಬಿ ಕಾಲೇಜಿನ ಸುಜೀತಕುಮಾರ ಯೋಗದ ಮಹತ್ವ ವಿವರಿಸಿದರೆ, ಯೋಗ ಶಿಕ್ಷಕ ಶಿವಕುಮಾರ ಯೋಗಾಭ್ಯಾಸ ನಡೆಸಿ ಕೊಟ್ಟರು. ಕಾಲೇಜಿನ ದೈಹಿಕ ಪ್ರಾಧ್ಯಾಪಕ ಮಹಾದಯ್ಯ ಸ್ವಾಮಿ ಕಾರ್ಯಕ್ರಮ ಸಂಘಟಿಸಿದರು. ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!