ಏರ್ ಶೋ ನಲ್ಲಿ HAL ನಿರ್ಮಿತ ಸ್ವದೇಶಿ ತರಬೇತಿ ವಿಮಾನ ಹಾರಾಟ ನಡೆಸಿದ ತೇಜಸ್ವಿ ಸೂರ್ಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರಿನಲ್ಲಿ ನಡೆಯುತ್ತಿರುವ ಏರೋ ಇಂಡಿಯಾ-2025 ರಲ್ಲಿ ವೈಮಾನಿಕ ಪ್ರದರ್ಶನದಲ್ಲಿ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಗುರುವಾರ ಸ್ವದೇಶಿ ನಿರ್ಮಿತ ತರಬೇತಿ ವಿಮಾನವಾದ HTT-40ಯಲ್ಲಿ ಹಾರಾಟ ನಡೆಸಿದರು.

ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್(HAL) ನಿರ್ಮಿಸಿದ ವಿಮಾನದಲ್ಲಿ ತೇಜಸ್ವಿ ಸೂರ್ಯ ಸುಮಾರು 30 ನಿಮಿಷಗಳ ಕಾಲ ಹಾರಾಟ ನಡೆಸುವ ಮೂಲಕ ಗಮನ ಸೆಳೆದರು.

Imageಬಳಿಕ ಮಾತನಾಡಿದ ಬಿಜೆಪಿ ಸಂಸದ, HAL ಬೆಂಗಳೂರಿನ ಹೆಮ್ಮೆ ಮತ್ತು ಭಾರತದ ಹೆಮ್ಮೆ ಮತ್ತು ಭಾರತದ ವೈಮಾನಿಕ ಪ್ರಗತಿಯ ಸಂಕೇತ ಎಂದು ಶ್ಲಾಘಿಸಿದರು.

ಇಂದು ನನಗೆ ನಮ್ಮದೇ HAL ನಿರ್ಮಿಸಿದ HTT 40 ನಲ್ಲಿ ಹಾರಾಟ ನಡೆಸುವ ಅವಕಾಶ ಸಿಕ್ಕಿತು. HAL ಭಾರತದ ಹೆಮ್ಮೆ. ಇದು ಬೆಂಗಳೂರಿನ ಹೆಮ್ಮೆ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!