ಹೊಸದಿಗಂತ ಡಿಜಿಟಲ್ ಡೆಸ್ಕ್:
ತೆಲಂಗಾಣ ವಿಧಾನಸಭೆಗೆ ಇಂದು ಮತದಾನ ನಡೆಯುತ್ತಿದ್ದು, ನಟ ಅಲ್ಲು ಅರ್ಜುನ್, ಜ್ಯೂ. ಎನ್ಟಿಆರ್, ಸಂಗೀತ ನಿರ್ದೇಶಕ ಕೀರವಾಣಿ,ಚಿರಂಜೀವಿ ಸರತಿ ಸಾಲಿನಲ್ಲಿ ನಿಂತು ನಮ್ಮ ಹಕ್ಕು ಚಲಾಯಿಸಿದ್ದಾರೆ.
ಸೆಲೆಬ್ರಿಟಿಗಳು ಕುಟುಂಬ ಸಮೇತರಾಗಿ ಬಂದು ಮತ ಚಲಾವಣೆ ಮಾಡಿದ್ದಾರೆ. ಜನರ ಮಧ್ಯೆ ನಿಂತು ತಮ್ಮ ಸರದಿಗಾಗಿ ಕಾದು ವೋಟ್ ಮಾಡಿ ತೆರಳಿದ್ದಾರೆ.
ತೆಲಂಗಾಣದಲ್ಲಿ ಒಟ್ಟಾರೆ 119 ವಿಧಾನಸಭಾ ಸ್ಥಾನಗಳಿಗೆ ಮತದಾನ ನಡೆಯುತ್ತಿದೆ. ತೆಲಂಗಾಣದ ಆಡಳಿತಾರೂಢ ಬಿಆರ್ಎಸ್ ಎಲ್ಲಾ 119 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.