ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಸಿಬಿಐ ವಿಶೇಷ ನ್ಯಾಯಾಲಯದಿಂದ ಶಿಕ್ಷೆಗೆ ಒಳಗಾದ ಹಿನ್ನೆಲೆಯಲ್ಲಿ ಶಾಸಕ ಸ್ಥಾನದಿಂದ ಅನರ್ಹಗೊಂಡಿದ್ದ ಬಿಜೆಪಿ ಶಾಸಕ ಜನಾರ್ಧನರೆಡ್ಡಿ ಅವರ ಅನರ್ಹತೆ ಆದೇಶವನ್ನು ಕರ್ನಾಟಕ ವಿಧಾನಸಭೆ ಹಿಂದಕ್ಕೆ ಪಡೆದಿದೆ.
ಸಿಬಿಐ ವಿಶೇಷ ನ್ಯಾಯಾಲಯದ ತೀರ್ಪಿಗೆ ತೆಲಂಗಾಣ ಹೈಕೋರ್ಟ್ ತಡೆ ನೀಡಿದೆ. ಈ ಹಿನ್ನೆಲೆಯಲ್ಲಿ ಗಾಲಿ ಜನಾರ್ಧನ ರೆಡ್ಡಿ ಅವರನ್ನು ಶಾಸಕರನ್ನಾಗಿ ಮುಂದುವರೆಸಿ ಸ್ಪೀಕರ್ ಕಚೇರಿ ಆದೇಶ ಹೊರಡಿಸಿದೆ.