ಹೊಸ ದಿಗಂತ ಡಿಜಿಟಲ್ ಡೆಸ್ಕ್:
ತೆಲಂಗಾಣ ವಿಶ್ವವಿದ್ಯಾಲಯದ ಉಪಕುಲಪತಿ ರವೀಂದರ್ ಗುಪ್ತಾ ಅವರು ಹೈದರಾಬಾದ್ ನನಿವಾಸದಲ್ಲಿ 50,000 ರೂ.ಗಳ ಲಂಚ ಪಡೆಯುತ್ತಿದ್ದಾಗ ಎಸಿಬಿ ಅಧಿಕಾರಿಗಳ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ಅಕ್ರಮಗಳ ಆರೋಪದ ಹಿನ್ನೆಲೆಯಲ್ಲಿ ಎಸಿಬಿ ವಿಚಕ್ಷಣಾ ಮತ್ತು ಜಾರಿ ಇಲಾಖೆಗಳು ತೆಲಂಗಾಣ ವಿಶ್ವವಿದ್ಯಾಲಯದಲ್ಲಿ ಶೋಧ ನಡೆಸಿವೆ. ಅಕ್ರಮ ನೇಮಕಾತಿಗಳು ಮತ್ತು ಅಕ್ರಮ ವಹಿವಾಟುಗಳು ನಡೆದಿವೆ ಎಂದು ಎಸಿಬಿ ದೃಢಪಡಿಸಿದೆ ಎಂದು ಮೂಲಗಳು ತಿಳಿಸಿದೆ.
ನಿಜಾಮಾಬಾದ್ ಜಿಲ್ಲೆಯ ಡಿಚ್ ಪಲ್ಲಿ ಬಳಿಯ ತೆಲಂಗಾಣ ವಿಶ್ವವಿದ್ಯಾಲಯದ ಮೇಲೆ ವಿಚಕ್ಷಣಾ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ವಿಶ್ವವಿದ್ಯಾಲಯದ ಆಡಳಿತ ಕಟ್ಟಡದಲ್ಲಿ ಶೋಧ ನಡೆಸಲಾಯಿತು. ಭ್ರಷ್ಟಾಚಾರದ ಆರೋಪದಿಂದಾಗಿ ಈ ಶೋಧಗಳನ್ನು ನಡೆಸಲಾಗಿದೆ ಎಂದು ವಿಚಕ್ಷಣಾ ಮತ್ತು ಜಾರಿ ಅಧಿಕಾರಿಗಳು ತಿಳಿಸಿದ್ದಾರೆ.