Friday, December 19, 2025

ಕಥೆಯೊಂದ ಹೇಳುವೆ 13 | ಮೂರ್ಖರ ಜೊತೆ ವಾದ ಮಾಡೋದಕ್ಕಿಂತ ಅವರು ಹೇಳಿದ್ದೆ ಸರಿ ಅಂತ ಸುಮ್ನಿರೋದು ಬೆಸ್ಟ್! ಏನಂತೀರಾ?

‘ನಾನು ಎಷ್ಟೇ ಸಲ ಹೇಳಿದ್ರು ಅವರು ಅವರದ್ದೇ ಸರಿ ಅಂತ ಹೇಳ್ತಾರೆ.. ಆದ್ರೆ ನಿಜ ಇರೋದು ನಾನು ಹೇಳಿದ್ದೆ. ಅವರು ನನ್ನ ಮಾತು ಕೇಳುದೇ ಇಲ್ಲ ಅಂತ ರಾಮ್ ಅವನ ಕ್ಲಾಸ್ ಮೇಟ್ ಬಗ್ಗೆ ಬೇಜಾರ್ ಮಾಡ್ಕೊಂಡು ಅವನ ಫ್ರೆಂಡ್ ಹತ್ರ ಹೇಳ್ತಾನೆ.

ಆಗ ಅವನ್ ಫ್ರೆಂಡ್ ಹೇಳ್ತಾನೆ ಅಷ್ಟೇನಾ ನಾನೊಂದು ಕಥೆ ಹೇಳ್ತಿನಿ ಆ ಕಥೆ ಕೇಳಿದ್ಮೇಲೆ ನೀನು ಡಿಸೈಡ್ ಮಾಡು ನಿನ್ನ ಕ್ಲಾಸ್ ಮೇಟ್ ಜೊತೆ argue ಮಾಡ್ಬೇಕಾ ಬೇಡ್ವಾ ಅಂತ.

ಒಮ್ಮೆ ಕತ್ತೆ ಮತ್ತೆ ಹುಲಿ ಹುಲ್ಲಿನ ಬಣ್ಣದ ಬಗ್ಗೆ ಜಗಳ ಆಡೋಕೆ ಶುರು ಮಾಡ್ತಾರೆ. ಹುಲಿ ಹೇಳುತ್ತೆ ಹುಲ್ಲಿನ ಬಣ್ಣ ಹಸಿರು ಅಂತ. ಆಗ ಕತ್ತೆ ಹೇಳುತ್ತೆ ಹುಲ್ಲಿನ ಬಣ್ಣ ನೀಲಿ ಅಂತ. ಇಬ್ಬರು ಜಗಳ ಆಡುತ್ತ ಕಾಡಿನ ರಾಜ ಸಿಂಹದ ಬಳಿ ಬಂದು ಕೇಳುತ್ತೆ ‘ ರಾಜ ನೀನೇ ಹೇಳು ಹುಲ್ಲಿನ ಬಣ್ಣ ಯಾವುದು? ಹಸಿರು ಅಥವಾ ನೀಲಿ ನಾ? ಅಂತ ಆಗ ಸಿಂಹ ಹೇಳುತ್ತೆ ಕತ್ತೆ ಹೇಳಿದ್ದೆ ನೀಲಿ ಬಣ್ಣ ಅಂತ. ಕತ್ತೆ ನಗುತ್ತಾ ಅಲ್ಲಿಂದ ಹೊರಟು ಹೋಗುತ್ತೆ. ಹುಲಿ ಕೇಳುತ್ತೆ ನೀನು ಯಾಕೆ ಸುಳ್ಳು ಹೇಳಿದೆ ಅಂತ. ಆಗ ಸಿಂಹ ಹೇಳುತ್ತೆ ‘ಮೂರ್ಖರ ಜೊತೆ ಯಾವತ್ತೂ ವಾದ ಮಾಡೋಕೆ ಹೋಗ್ಬಾರ್ದು’ ಅವ್ರಿಗೆ ಸತ್ಯ ಏನು ಅನ್ನೋದು ಬೇಕಾಗಿರಲ್ಲ ಅವರ ವಾದವೇ ಸರಿ ಅನ್ನೋದು ಬೇಕಾಗಿರುತ್ತೆ ಅಂತ.

‘ರಾಮ್ ಈಗ ಹೇಳು ನಿನ್ನ ಕ್ಲಾಸ್ ಮೇಟ್ ಜೊತೆ ವಾದ ಮಾಡ್ತಿಯಾ’? ರಾಮ್ ಹೇಳ್ತಾನೆ ‘ಖಂಡಿತ ಇಲ್ಲ ಸರಿ ಯಾವ್ದು ಅನ್ನೋದು ನಂಗೆ ಗೊತ್ತಿದೆ ಅಲ್ವ, ಅವನಿಗೋಸ್ಕರ ನಾನು ಯಾಕೆ ಬೇಜಾರ್ ಮಾಡ್ಕೋಬೇಕು’ ಅಂತ ಹೇಳಿ ಹೋಗ್ತಾನೆ.

error: Content is protected !!