ಹೊಸದಿಗಂತ ಡಿಜಿಟಲ್ ಡೆಸ್ಕ್:
ಮದುವೆ, ಪ್ರಪೋಸಲ್, ಲವ್ ಅನ್ನೋದು ಎಲ್ಲರ ಜೀವನದಲ್ಲಿಯೂ ಬಹುದೊಡ್ಡ ಸಂಗತಿ, ಅದರಲ್ಲಿಯೂ ಹೆಣ್ಣುಮಕ್ಕಳಿಗೆ ಇದರ ಬಗ್ಗೆ ತುಸು ಹೆಚ್ಚೇ ಆಸಕ್ತಿ.
ಬೇರೆ ದೇಶಗಳಲ್ಲಿ ಅಥವಾ ಕ್ರಿಶ್ಚಿಯನ್ ವೆಡ್ಡಿಂಗ್‌ಗಳಲ್ಲಿ ಸಾಮಾನ್ಯವಾಗಿ ಮದುವೆಗೆ ಬಳಸಿದ ಹೂವಿನ ಬೊಕ್ಕೆಯನ್ನು ಮದುವೆಯಾದ ಯುವತಿ ಹಿಂಬದಿ ನಿಂತು ಎಸೆಯುತ್ತಾಳೆ. ಇತ್ತ ಮದುವೆಯಾಗದ ಹುಡುಗಿಯರು ಅದನ್ನು ಕ್ಯಾಚ್ ಹಿಡಿಯಲು ನಿಂತಿರುತ್ತಾರೆ. ಯಾರ ಕೈಗೆ ಬೊಕ್ಕೆ ಬಂದು ಸೇರುತ್ತದೆಯೋ ಮುಂದಿನ ಮದುವೆ ಅವರದ್ದೇ ಅನ್ನೋದು ನಂಬಿಕೆ.
ಇಂಥದ್ದೇ ಒಂದು ವಿಡಿಯೋ ವೈರಲ್ ಆಗಿದ್ದು, ಕ್ಯೂಟ್ ಪ್ರಪೋಸಲ್ ಎನಿಸಿಕೊಂಡಿದೆ. ನವವಧು ಬೊಕ್ಕೆಯನ್ನು ಎಸೆಯದೇ ಸೀದ ತಂದು ತನ್ನ ಸ್ನೇಹಿತೆ ಕೈಗೆ ನೀಡುತ್ತಾಳೆ. ಆಕೆಗೆ ಏನೂ ಅರ್ಥವಾಗದೇ ಅದನ್ನು ಎಸೆಯಬೇಕಿತ್ತು, ನನ್ನ ಕೈಗೆ ತಂದುಕೊಟ್ಟಿದ್ದಾಳಲ್ಲಾ ಎಂದು ಆಲೋಚಿಸುತ್ತಾಳೆ. ಈ ವೇಳೆ ಆಕೆಯ ಹಿಂದೆಯೇ ಪ್ರಿಯಕರ ರಿಂಗ್ ಹಿಡಿದು ಕುಳಿತಿರುತ್ತಾರೆ. ಮುಂದಿನ ಮದುವೆ ಅವಳದ್ದೇ ಎಂದು ವಧು ಆಕೆಗೆ ಬೊಕ್ಕೆ ನೀಡಿದ್ದು, ಬಾಯ್‌ಫ್ರೆಂಡ್ ಮಂಡಿಯೂರಿ ಕುಳಿತಿದ್ದನ್ನು ಕಂಡ ಸ್ನೇಹಿತೆ ಭಾವುಕಳಾಗುತ್ತಾಳೆ. ಕಡೆಗೂ ಮದುವೆಗೆ ಒಕೆ ಅಂತಾಳೆ. ಈ ಕ್ಯೂಟ್ ವಿಡಿಯೋ ಮಿಸ್ ಮಾಡದೇ ಒಮ್ಮೆ ನೋಡಿ..
https://twitter.com/TheFigen_/status/1671883594619588612?s=20