Friday, November 28, 2025

ಕಥೆಯೊಂದ ಹೇಳುವೆ 2 | ಯಾರು ಏನೇ ಹೇಳಿದ್ರು, ನಮ್ಮ ಗುರಿ ಬಿಡ್ಬಾರ್ದು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅವಳು ತುಂಬಾ ನಾಚಿಕೆ ಸ್ವಭಾವದ ಪುಟ್ಟ ಹುಡುಗಿ. ಕ್ರಿಕೆಟ್ ಆಡೋದು ಅಂದ್ರೆ ಅವಳಿಗೆ ಪಂಚಪ್ರಾಣ. ಕ್ರಿಕೆಟ್ ನಲ್ಲಿ ಅವಳಿಗಿರೋ ಆಸಕ್ತಿ ನೋಡಿ ಆಕೆಯ ಸ್ನೇಹಿತರು ಅವಳನ್ನ ರೇಗಿಸುತ್ತಿರುತ್ತಾರೆ. ‘ಇದು ಹುಡುಗರ ಆಟ, ನೀನಿಗಲ್ಲ’ ಅಂತ. ಆದ್ರೆ ಅವಳಿಗೆ ಸ್ವಲ್ಪನೂ ಬೇಜಾರಾಗೋದಿಲ್ಲ. ಅವಳು ಯಾವಾಗ್ಲೂ ಆಟದ ಕಡೆ ಗಮನ ಕೊಡುತ್ತಿರುತ್ತಾಳೆ. ಆದ್ರೆ ಪಾಠಾನೂ ಮರೆಯಲ್ಲ.

ಪ್ರತಿದಿನ, ಶಾಲೆಯಿಂದ ಬಂದು ಹೋಮ್ ವರ್ಕ್ ಮಾಡಿ ಕ್ರಿಕೆಟ್ ಪ್ರಾಕ್ಟಿಸ್ ಮಾಡ್ತಾಳೆ. ಅವಳಿಗೆ ಈ ಆಟದಲ್ಲಿರೋ ಇಂಟ್ರೆಸ್ಟ್ ನೋಡಿ, ಅಮ್ಮ ತುಂಬಾನೇ ಖುಷಿ ಪಡ್ತಾರೆ. ಅವ್ಳಿಗೆ ಬೇಕಾಗಿರೋ ಎಲ್ಲ ಸಪೋರ್ಟ್ ಕೂಡ ಮಾಡ್ತಾರೆ.

ಶಾಲೆಯಲ್ಲಿ ಇಂಟರ್ ಸ್ಕೂಲ್ ಕಾಂಪಿಟೇಷನ್ಸ್ ಶುರವಾಗುತ್ತೆ. ಅವಳು ಭಾಗವಹಿಸುತ್ತಾಳೆ. ಈಗ ಮತ್ತೆ ಅವಳ ಫ್ರೆಂಡ್ಸ್ ಅವಳನ್ನು ಅಪಹಾಸ್ಯ ಮಾಡ್ತಾರೆ. ಆದರೆ ಅವಳು ಯಾವುದಕ್ಕೂ ತಲೆ ಕೆಡಿಸಿಕೊಳ್ಳೋದೇ ಇಲ್ಲ. ಉತ್ತಮ ಪ್ರದರ್ಶನ ಪ್ರದರ್ಶನ ಕೊಡ್ತಾಳೆ. ಫಸ್ಟ್ ಪ್ರೈಸ್ ಕೂಡ ತಗೋತಾಳೆ. ಅವಳ ಫ್ರೆಂಡ್ಸ್ ಎಲ್ಲಾ ‘ನಾವು ಅವಳನ್ನ ರೇಗಿಸಬಾರದಿತ್ತು ಅಂತ’ ಬೇಜಾರಾಗ್ತಾರೆ.

ನಾವು ಒಂದು ಕೆಲಸ ಮಾಡ್ತೇವೆ ಅಂತಿದ್ರೆ, ಯಾರು ಏನೇ ಹೇಳಿದ್ರು ನಾವು ತಲೆ ಕೆಡಿಸಿಕೊಳ್ಳಬಾರದು. ನಮ್ಮ ಗುರಿ ಕಡೆನೇ ಗಮನ ಕೊಡ್ಬೇಕು ಅವಾಗ ಮಾತ್ರ ಗೆಲುವು ನಮ್ಮದೇ ಆಗೋದು ಅಲ್ವಾ? ಏನ್ ಹೇಳ್ತೀರಾ?

error: Content is protected !!