ಪುಟ್ಟ ಹುಡುಗ ಅವನ ಅಪ್ಪ ಅಮ್ಮನ ಜೊತೆ ಒಂದು ಸುಂದರವಾದ ಮನೆಯಲ್ಲಿ ವಾಸಿಸುತ್ತಿದ್ದಾನೆ. ಒಂದು ದಿನ ಹುಡುಗ ಅಳುತ್ತಾ ಕೂತಿದ್ದ. ಅಪ್ಪ ಬಂದು ‘ಏನಾಯ್ತು ಪುಟ್ಟ; ಅಂತ ಕೇಳಿದಾಗ ಅವನು “ನನಗೆ ಜೀವನದಲ್ಲಿ ತುಂಬಾ ಸಮಸ್ಯೆಗಳಿವೆ” ಅಂತ ಹೇಳುತ್ತಾನೆ. ಅವನ ‘ಸಮಸ್ಯೆಗಳ’ ಬಗ್ಗೆ ಮಾತನಾಡುತ್ತಾನೆ.
ಅಪ್ಪನಿಗೆ ನಗು ಬರುತ್ತೆ. ಇಷ್ಟು ಚಿಕ್ಕ ವಯಸ್ಸಿನಲ್ಲೇ ಇಷ್ಟ್ಟೊಂದು ಸಮಸ್ಯೆನಾ ಅಂತ ಹೇಳಿ. ಇವನ ಸಮಸ್ಯೆಗೆ ಒಂದು ಪರಿಹಾರ ಕೊಡೋಣ ಅಂತ ಅವನು ಒಂದು ಬಟ್ಟಲನ್ನು ತಂದು ಅದರಲ್ಲಿ ಒಂದು ಆಲೂಗಡ್ಡೆ, ಮೊಟ್ಟೆ ಮತ್ತು ಕೆಲವು ಕಾಫಿ ಬೀಜಗಳನ್ನು ಇಡುತ್ತಾನೆ.
ಬಟ್ಟಲಿನಲ್ಲಿರುವ ಪದಾರ್ಥಗಳನ್ನು ಮುಟ್ಟಿ ಅವುಗಳ ಬಗ್ಗೆ ಏನು ಅನಿಸುತ್ತದೆ ಎಂದು ಹೇಳಲು ಹೇಳುತ್ತಾನೆ. ಸ್ಪರ್ಶಿಸುವಾಗ ಪ್ರತಿಯೊಂದರ ಬಗ್ಗೆ ತನಗೆ ಹೇಗೆ ಅನಿಸುತ್ತದೆ ಎಂಬುದನ್ನುಹುಡುಗ ವಿವರಿಸುತ್ತಾನೆ.
ತಂದೆ ನಗುತ್ತಾ ಅವೆಲ್ಲವನ್ನು ಒಲೆಯ ಮೇಲಿಟ್ಟು ಬೇಯಿಸಲು ಹೇಳುತ್ತಾನೆ. ಕೆಲವು ನಿಮಿಷಗಳ ನಂತರ, ತಂದೆ ಒಲೆ ಆಫ್ ಮಾಡಿ ಅವು ತಣ್ಣಗಾದ ಮೇಲೆ ತಂದೆ ಅವನನ್ನು ಮತ್ತೊಮ್ಮೆ ಮುಟ್ಟಿ ನೋಡಲು ಹೇಳುತ್ತಾನೆ. ಈ ಬಾರಿ ಆ ಹುಡುಗನ ಉತ್ತರ ಬೇರೆಯಿತ್ತು.
ಆಲೂಗಡ್ಡೆಯ ಸಿಪ್ಪೆ ಸುಲಿಯುವುದು ಸುಲಭವಾಗಿದೆ ಏಕೆಂದರೆ ಅದು ತುಂಬಾ ಮೃದುವಾಗಿದೆ, ಮೊಟ್ಟೆ ಗಟ್ಟಿಯಾಗಿದೆ ಅದರ ಸಿಪ್ಪೆ ಸುಲಿಯಲು ಸುಲಭ ಮತ್ತು ಬೀನ್ಸ್‌ನಿಂದ ತಾಜಾ ಕಾಫಿ ಸುವಾಸನೆ ಬರುತ್ತಿದೆ ಎಂದು ಹೇಳುತ್ತಾನೆ.
ಹುಡುಗನ ಮಾತು ಕೇಳಿ ತಂದೆ ನಗುತ್ತಾ ಆಲೂಗಡ್ಡೆ, ಮೊಟ್ಟೆ ಮತ್ತು ಕಾಫಿ ಬೀಜಗಳು ಪ್ರತಿಕೂಲ ಪರಿಸ್ಥಿತಿಗಳಿಗೆ ಹೇಗೆ ಹೊಂದಿಕೊಂಡಿವೆ ಎಂದು ಹೇಳುತ್ತಾನೆ. ಜೀವನವು ಹಾಗೆ ಪ್ರತಿಯೊಂದು ಸಮಸ್ಯೆಗಳು ನಮ್ಮನ್ನ ಇನ್ನಷ್ಟು ಗಟ್ಟಿಗೊಳಿಸುತ್ತವೆ ಎಂದು ಆ ಹುಡುಗನಿಗೆ ಅರ್ಥ ಮಾಡಿಸುತ್ತಾರೆ.
ಈ ಕಥೆಯಿಂದ ಗೊತ್ತಾಗೋದು ಏನಂದ್ರೆ ಸಮಸ್ಯೆಗಳು ಜೀವನದ ಒಂದು ಭಾಗ. ಅವುಗಳಿಗೆ ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ ಎಂಬುದು ನಮ್ಮನ್ನು ಉತ್ತಮ ವ್ಯಕ್ತಿಯನ್ನಾಗಿ ಮಾಡುತ್ತದೆ ಅಂತ. ನಿಜ ಅಲ್ವಾ?

