Wednesday, December 10, 2025

ಕಥೆಯೊಂದ ಹೇಳುವೆ 9 | ಶಾಂತವಾಗಿ ಯೋಚನೆ ಮಾಡಿದ್ರೆ ಎಲ್ಲವೂ ಸಾಧ್ಯ: ಈ ಪುಟ್ಟ ಹುಡುಗಿ ತರ! ಏನಂತೀರಾ?

‘ಪುಟ್ಟ ಮಾರ್ಕೆಟ್ ಗೆ ಹೋಗಿ ಈ ಲಿಸ್ಟ್ ನಲ್ಲಿರೋ ಸಾಮಾನು ತಗೊಂಡು ಬರ್ತಿಯಾ?’ ಅಂತ ಅಮ್ಮ ಪುಟ್ಟ ಮಗಳನ್ನು ಕೇಳ್ತಾರೆ. ‘ಅದಕ್ಕೇನಂತೆ ಅಮ್ಮ, ಲಿಸ್ಟ್ ಕೊಡು’ ಎಂದು ಅಮ್ಮನ ಕೈಯಿಂದ ಚೀಟಿ, ದುಡ್ಡು ತಗೊಂಡು ಅಂಗಡಿಗೆ ಹೋಗ್ತಾಳೆ.

ಅವಳೀಗ ಅಂಗಡಿ ಮುಂದೆ ನಿಂತು ಡೋರ್ ಓಪನ್ ಮಾಡೋಕೆ ಟ್ರೈ ಮಾಡ್ತಾಳೆ ಆಗೋದೇ ಇಲ್ಲ. ತುಂಬಾ ಸಲ ಟ್ರೈ ಮಾಡ್ತಾಳೆ, ಬಾಗಿಲು ದೂಡ್ತಾಳೆ, ದೂಡ್ತಾಳೆ ಆದ್ರೆ ಒಂದು ಚೂರು ಅಲುಗಾಡೋದೇ ಇಲ್ಲ ಬಾಗಿಲು. ಅವಳಿಗೆ ತುಂಬಾನೇ ಬೇಜಾರಾಗುತ್ತೆ. ಕಣ್ಣಲ್ಲಿ ನೀರು ಬರುತ್ತೆ ಏನ್ ಮಾಡೋದು ಅಂತ ಅಲ್ಲೇ ಬಾಗಿಲ ಬಳಿ ಸುಮ್ಮ್ನೆ ಕೂತು ಸ್ವಲ್ಪ ಹೊತ್ತು ಸಮಾಧಾನ ಮಾಡ್ಕೊಂಡು ಮತ್ತೆ ಈ ಸಲ ಬಾಗಿಲು ದೂಡಲ್ಲ, ಎಳೀತಾಳೆ ಬಾಗಿಲು ಓಪನ್ ಆಗುತ್ತೆ.

ಇದನ್ನ ನೋಡಿ ಅಂಗಡಿಯ ಓನರ್ ಹೇಳ್ತಾರೆ ‘ಪುಟ್ಟಿ ನೋಡು ಸುಮ್ಮ್ನೆ ನಿನ್ನ ದೇಹಬಲ ಹಾಕಿ ದೂಡಿದ್ರೆ ಬಾಗಿಲು ಓಪನ್ ಆಗಿಲ್ಲ. ಯಾಕೆ ಗೊತ್ತಾ ನೀನು ಓಪನ್ ಮಾಡಿದ ರೀತಿ ತಪ್ಪಾಗಿತ್ತು. ಶಾಂತ ಮನಸ್ಸಿನಿಂದ ಯೋಚನೆ ಮಾಡಿ ಓಪನ್ ಮಾಡಿದೆ ನೋಡು ಎಷ್ಟು ಸುಲಭವಾಗಿ ಬಂತು’ ಅಂತ.

ಈ ಕಥೆಯಲ್ಲಿ ನಾವು ಏನ್ ಅರ್ಥ ಮಾಡಿಕೊಳ್ಳಬೇಕು ಅಂದ್ರೆ ನಮ್ಮ ಎಲ್ಲ ಶಕ್ತಿಯನ್ನು ನಾವು ಒಂದು ಪ್ರಾಬ್ಲಮ್ ಸರಿ ಮಾಡೋಕೆ ಹಾಕ್ತೇವೆ ಅದು ದೈಹಿಕವಾಗಿರಲಿ ಅಥವಾ ಮಾನಸಿಕವಾಗಿರಲಿ. ಆದ್ರೆ ನಾವು ಆ ಪ್ರಾಬ್ಲಮ್ ನ ಸರಿಯಾಗಿ ಗುರುತಿಸೋಕೆ ಮರೆತು ಬಿಡ್ತೇವೆ. ಆಗ ಒಮ್ಮೆ ಶಾಂತವಾಗಿ ಸಮಾಧಾನದಿಂದ ಯೋಚನೆ ಮಾಡಿ ಮುಂದೆ ಹೆಜ್ಜೆ ಇಡಬೇಕು.

error: Content is protected !!