ಹೊಸದಿಗಂತ ವರದಿ, ಗೋಕರ್ಣ:
ಸಮುದ್ರ ಅಲೆಗಳ ಹೊಡೆತಕ್ಕೆ ಸಿಲುಕಿ ಕೊಚ್ಚಿ ಹೋಗುವ ಸ್ಥಿತಿಯಲ್ಲಿದ್ದ ತೆಲುಗು ಚಿತ್ರರಂಗದ ನಟನನ್ನು ರಕ್ಷಣಾ ಸಿಬ್ಬಂದಿಗಳು ರಕ್ಷಿಸಿ ಪ್ರಾಣಾಪಾಯದಿಂದ ಪಾರು ಮಾಡಿದ ಘಟನೆ ಇಲ್ಲಿನ ಕುಡ್ಲೆ ಕಡಲ ತೀರದಲ್ಲಿ ಸಂಭವಿಸಿದೆ.
ಹೈದರಾಬಾದ್ ಮೂಲದ ಚಿತ್ರನಟ ಅಕಿಲ್ ರಾಜ್(26) ಎನ್ನುವವರು ಗೋಕರ್ಣ ಕುಡ್ಲೆ ಬೀಚಿನಲ್ಲಿ ನೀರಿಗಿಳಿದ ಸಂದರ್ಭದಲ್ಲಿ ಅಲೆಗಳ ಅಬ್ಬರಕ್ಕೆ ಕೊಚ್ಚಿ ಹೋಗಿದ್ದು ಇದನ್ನು ಗಮನಿಸಿದ ಗೋಕರ್ಣ ಅಡ್ವೆಂಚರ್ ಸಂಸ್ಥೆಯ ಸಿಬ್ಬಂದಿ ಮತ್ತು ಲೈಫ್ ಗಾರ್ಡ್ ಸಿಬ್ಬಂದಿಗಳು ಸ್ಕೀ ವಾಟರ್ ಬೈಕ್ ಮೂಲಕ ತೆರಳಿ ಅವರನ್ನು ಸುರಕ್ಷಿತವಾಗಿ ಕಡಲ ತೀರಕ್ಕೆ ಕರೆ ತಂದಿದ್ದಾರೆ.