ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಾಲಿವುಡ್‌ನಲ್ಲಿ ಈ ತಿಂಗಳ ಅಂತ್ಯಕ್ಕೆ ತೆರೆ ಕಾಣಲಿರುವ ‘ಆಂಧ್ರ ಕಿಂಗ್ ತಾಲೂಕಾ’ ಸಿನಿಮಾ ಸುದ್ದಿಯಲ್ಲಿದೆ. ಬಹಳ ದಿನಗಳಿಂದ ಉಪೇಂದ್ರ ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ ಎನ್ನುವ ಕುತೂಹಲಕ್ಕೆ ಟ್ರೈಲರ್ ರಿಲೀಸ್ ಮೂಲಕ ಉತ್ತರ ಸಿಕ್ಕಿದೆ. ಟ್ರೈಲರ್ ನೋಡಿದ ಕ್ಷಣಕ್ಕೇ ಸಿನಿಮಾ ಒಂದು ಭಾವುಕ ಫ್ಯಾನ್–ಸ್ಟಾರ್ ಕಥೆಯನ್ನು ಹೇಳಲಿದೆ ಅನ್ನೋ ಫೀಲ್ ಬರುತ್ತದೆ. ಇಡೀ ಸಿನಿಮಾದಲ್ಲಿ ಉಪೇಂದ್ರ ‘ಕಿಂಗ್’ ಆಗಿ ಮಿಂಚುತ್ತಿದ್ದಾರೆ. ಇವರ ಕ್ರೇಜ್‌ಗೆ ಬಿದ್ದ ಅಭಿಮಾನಿಯ ಬದುಕೇ ಈ ಚಿತ್ರದ ಕಥೆ.
ಚಿತ್ರದಲ್ಲಿ ರಾಮ್ ಪೋತಿನೆನಿ ಸಾಗರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಕಿಂಗ್ ಉಪೇಂದ್ರನ ಮೇಲಿನ ತಮ್ಮ ಬೃಹತ್ ಅಭಿಮಾನಕ್ಕಾಗಿ ಏನೆಲ್ಲಾ ಮಾಡುತ್ತಾರೆ ಎನ್ನುವುದನ್ನೇ ಚಿತ್ರ ತೋರಿಸಲಿದೆ. ಸಿನಿಮಾದ ಬಗ್ಗೆ ಉಪೇಂದ್ರ ಹಾಕಿದ್ದ ಪೋಸ್ಟ್‌ನಲ್ಲಿ “ನಿಮ್ಮನ್ನ ನೀವು ನೋಡಿಕೊಳ್ಳ್ಬೇಕಾ? ಹಾಗಿದ್ರೆ ಆಂಧ್ರ ಕಿಂಗ್ ತಾಲೂಕಾ ನೋಡಿ” ಅಂತ ಹಂಚಿಕೊಂಡಿದ್ದು ಕುತೂಹಲದ ಮಟ್ಟ ಹೆಚ್ಚಿಸಿದೆ.
ಮಹೇಶ್ ಬಾಬು.ಪಿ ನಿರ್ದೇಶನ, ಕಥೆ ಹಾಗೂ ಚಿತ್ರಕಥೆ ಆಲ್ ಇನ್ ಒನ್ ರೀತಿಯಲ್ಲಿ ಸಿದ್ಧವಾಗಿರುವ ಈ ಸಿನಿಮಾದಲ್ಲಿ ಅಭಿಮಾನಿಯ ಜೀವನ, ಕಷ್ಟ, ಭಾವನೆ, ಹಾಗೂ ಕಿಂಗ್ ಉಪೇಂದ್ರ ಅವರ ಪಾತ್ರ ಏನು ಎನ್ನುವುದನ್ನೆಲ್ಲಾ ಟ್ರೈಲರ್ ಸೂಚಿಸಿದೆ. ರಿಲೀಸ್‌ಗೂ ಮುನ್ನವೇ ಸಿನಿಮಾ ಮೇಲೆ ದೊಡ್ಡ ನಿರೀಕ್ಷೆ ಕಂಡುಬರುತ್ತಿದೆ. ನವೆಂಬರ್ 27ರಂದು ಚಿತ್ರ ಬಿಡುಗಡೆಯಾಗಲಿದೆ.
ಉಪೇಂದ್ರ–ರಾಮ್ ಜೊತೆಗೆ ರಾವ್ ರಾಮೇಶ್, ಮುರಳಿ ಶರ್ಮಾ, ಸತ್ಯ, ರಾಹುಲ್ ರಾಮಕೃಷ್ಣ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ನಾಯಕಿಯಾಗಿ ಭಾಗ್ಯಶ್ರೀ ಬೋರ್ಸ್ ಕಾಣಿಸಿಕೊಂಡಿದ್ದಾರೆ. ವಿವೇಕ್–ಮರ್ವಿನ್ ಸಂಗೀತ, ಸಿದ್ಧಾರ್ಥ್ ನುನಿ ಕ್ಯಾಮೆರಾ ಕೆಲಸ ಸಿನಿಮಾ ದೊಡ್ಡ ಮಟ್ಟದ ಎಂಟರ್ಟೈನ್‌ಮೆಂಟ್ ನೀಡಲಿದೆ ಎನ್ನುವ ಭರವಸೆ ಟ್ರೈಲರ್ ಮೂಡಿಸಿದೆ.

