ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದೋರ್‌ನ ದೇವಸ್ಥಾನದ ಮೆಟ್ಟಿಲು ಬಾವಿ ಕುಸಿದು 36 ಮಂದಿ ಮೃತಪಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಲಿಕೆಯು ಅಕ್ರಮ ನಿರ್ಮಾಣ ತೆರವು ಕಾರ್ಯಕ್ಕೆ ಮುಂದಾಗಿದ್ದು, ಇಂದಿನಿಂದಲೇ ತೆರವು ಕಾರ್ಯ ಆರಂಭವಾಗಿದೆ.
ಇಂದೋರ್‌ನ ಬೇಳೇಶ್ವರ ಜುಲೇಲಾಲ್ ಮಹಾದೇವ ದೇವಸ್ಥಾನದಲ್ಲಿ ರಾಮ ನವಮಿ ಆಚರಣೆ ವೇಳೆ ಏಕಾಏಕಿ ಪುರಾತನ ಮೆಟ್ಟಿಲು ಬಾವಿ ಮೇಲ್ಛಾವಣಿ ಕುಸಿದಿದ್ದು, 45 ಮಂದಿ ಮೃತಪಟ್ಟಿದ್ದರು.
ಬಾವಿ ಕುಸಿತ ದುರಂತಕ್ಕೆ ಅಕ್ರಮ ನಿರ್ಮಾಣ ಕಾರಣ ಎಂದು ಕಾಂಗ್ರೆಸ್ ಮುಖ್ಯಸ್ಥ ಕಮಲ್ ನಾಥ್ ಆರೋಪಿಸಿದ್ದರು. ಬಿಜೆಪಿ ಒತ್ತಾಯಕ್ಕೆ ಮಣಿದು ಸ್ಥಳೀಯ ಮಹಾನಗರ ಪಾಲಿಕೆ ಮೆಟ್ಟಿಲುಬಾವಿಯ ಮೇಲಿನ ಅನಧಿಕೃತ ನಿರ್ಮಾಣವನ್ನು ಕೆಡವಿಲ್ಲ. ಇನ್ನೂ ಕೆಡವದಿದ್ದರೆ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುವುದಾಗಿ ಹೇಳಿದ್ದರು.