ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಹಸಾಂಡಹಳ್ಳಿಯ ಮುನೇಶ್ವರ ದೇವಸ್ಥಾನಕ್ಕೆ ಅತಿವೇಗದಿಂದ ಬಂದ ಟೆಂಪೋ ವಾಹನ ಡಿಕ್ಕಿ ಹೊಡೆದು ಭೀಕರ ಅಪಘಾತ ಸಂಭವಿಸಿದ್ದು, ಓರ್ವ ಸಾವನ್ನಪ್ಪಿದ್ದಾನೆ.
ಮುನೇಶ್ವರ ದೇವಸ್ಥಾನಕ್ಕೆ ಟೆಂಪೋ ನುಗ್ಗಿದ್ದು, ಈ ಭೀಕರ ಘಟನೆಯಿಂದ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು, ದೇವಸ್ಥಾನದಲ್ಲಿ ಪೂಜೆ ಸಲ್ಲಿಸುತ್ತಿದ್ದ ಮೂವರು ಮಹಿಳೆಯರು ಗಂಭೀರವಾಗಿ ಗಾಯಗೊಂಡಿದ್ದಾರೆ.
ದುರದೃಷ್ಟವಶಾತ್, ಮಾಸ್ತಿ ಗ್ರಾಮದ ಚಂದ್ರಶೇಖರ್ (38) ಮೃತಪಟ್ಟಿದ್ದಾರೆ. ಮಾಸ್ತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.