ಬೆಂಗಳೂರಿನಲ್ಲಿ ಪಿಎಸ್​ಐನ ಹೊಡೆತಕ್ಕೆ ಕಿವುಡನಾದ ಮನೆ ಬಾಡಿಗೆದಾರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರಿನಲ್ಲಿ ಪಿಎಸ್​ಐನ ಹೊಡೆತಕ್ಕೆ ಮನೆ ಬಾಡಿಗೆದಾರ ಶಾಶ್ವತವಾಗಿ ಕಿವುಡನಾಗಿರುವಂತಹ ಘಟನೆಯೊಂದು ನಡೆದಿದೆ.

ಬೇಗೂರು ಪೊಲೀಸ್ ಠಾಣೆ PSI ಪುನೀತ್​ನಿಂದ ಬಾಡಿಗೆದಾರ ಉದಯ ಕುಮಾರ್(26) ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ಇಬ್ಬರು ಮನೆ ಮಾಲೀಕರ ನಡುವಿನ ಜಗಳದಲ್ಲಿ ಬಾಡಿಗೆದಾರ ಬಲಿಪಶುವಾಗಿದ್ದು, ಸದ್ಯ ಘಟನೆ ಸಂಬಂಧ ಉದಯ ಕುಮಾರ್​ ನ್ಯಾಯಕ್ಕಾಗಿ ಕೋರ್ಟ್ ಮೆಟ್ಟಿಲೇರಿದ್ದಾರೆ.

ಬೇಗೂರು ಪೊಲೀಸ್ ಠಾಣೆ ಪಿಎಸ್ಐ ಪುನೀತ್​​ ಅನವಶ್ಯಕವಾಗಿ ಠಾಣೆಗೆ ಕರೆದೊಯ್ದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಕಾಲಿನಿಂದ ಒದ್ದು, ಕೈಯಿಂದ ಕಪಾಳಕ್ಕೆ ಹೊಡೆದು ಹಲ್ಲೆ ಮಾಡಿದ್ದಾರೆ. ಇದರಿಂದ ಉದಯಗೆ ಎಡಕಿವಿ ಸಂಪೂರ್ಣ ಶ್ರವಣ ದೋಷವಾಗಿರುವುದು ವೈದ್ಯಕೀಯ ಪರೀಕ್ಷೆ ವೇಳೆ ಗೊತ್ತಾಗಿದೆ. ಸದ್ಯ ಉದಯ​ ಪರ ವಕೀಲರು ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!