ಹೊಸದಿಗಂತ ವರದಿ ಹುಬ್ಬಳ್ಳಿ:
ರಾಜ್ಯ ಸರ್ಕಾರದ ಈಗಾಗಲೇ ಮಹದಾಯಿ ಅನುಷ್ಠಾನ ಯೋಜನೆ ಕಾಮಗಾರಿ ಟೆಂಡರ್ ಕರೆಯಲಾಗಿದೆ. ದೊಡ್ಡ ಸ್ಥಾನದಲ್ಲಿರುವ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅನುಮತಿ ಕೊಡಿಸಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಆಗ್ರಹಿಸಿದರು.
ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಡಿಪಿಆರ್ ಸಿಕ್ಕಿದೆ ಎಂದು ಸಂಭ್ರಮಾಚರಣೆ ಮಾಡಿದರು. ಅದು ಏನು ಆಯ್ತು. ಯಾಕೆ ಅರಣ್ಯ ಹಾಗೂ ಇನ್ನಿತರ ಅನುಮತಿ ಸಿಕ್ಕಿಲ್ಲ ಎಂದು ಪ್ರಶ್ನಿಸಿದರು.
ವನ್ಯ ಜೀವಿ ಮಂಡಳಿಯ ಅನುಮತಿ ಕೊಡಿಸಿದರೇ ಅವರಿಗೆ ಗೌರವ ಸಿಗುತ್ತದೆ. ಕೇವಲ ಅರ್ಧಗಂಟೆಗೆ ಸಂಬಂಧಿಸಿದ ಸಚಿವರು, ಅಧಿಕಾರಿಗಳ ಸಭೆ ನಡೆಸಿ ಅನುಮತಿ ಕೊಡಿಸಬಹುದು. ಅಧಿಕಾರ ಯಾವತ್ತು ಶಾಶ್ವತ ಅಲ್ಲ. ಬಡವ ಬಡವನಾಗಿ ಇರಲ್ಲ. ಕೇಂದ್ರ ಸಚಿವ ಪ್ರಶ್ನೆ ಮಾಡಿ ನಿಮ್ಮ ಕೈಯಲ್ಲಿ ಅನುಮತಿ ಕೊಡಿಲು ಆಗುತ್ತಾ ಅಥವಾ ಇಲ್ಲ ಎಂದು ಹೇಳಿದರು.
ಒಂದು ತಿಂಗಳು ಕಳೆಯಲಿ ಮಾಜಿ ಸಿಎಂ ಜಗದೀಶ ಶೆಟ್ಟರ ಅವರಿಂದ ಪಶ್ಚಾತ್ತಾಪ ಹೇಳಿಕೆ ಯಾವ ರೀತಿ ಬರುತ್ತೇನೆ ನೋಡುವರಂತೆ. ಕಾಂಗ್ರೆಸ್ ಮೂವರು ಅಷ್ಟೇ ಬರಲ್ಲ ಇನ್ನೂ ಜಾಸ್ತಿ ಜನರ ಬರುತ್ತಾರೆ. ಎಲ್ಲವನ್ನೂ ಬಹಿರಂಗ ಪಡಿಸಲು ಸಾಧ್ಯವಿಲ್ಲ ಎಂದರು.
ಪಾಕ್ ಪರ ಘೋಷಣೆ ಪಾರದರ್ಶಕ ವಾಗಿ ತನಿಖೆ ಮಾಡಿ, ತಪಿತಸ್ಥರ ಬಂಧಿಸಲಾಗಿದೆ. ಬಿಜೆಪಿ ಅವರ ತರ ಮುಚ್ಚಿ ಹಾಕಿಲ್ಲ. ಮಂಡ್ಯದಲ್ಲಿ ಏನಾಯಿತು. ಕೇಸರಿ ಶಾಲೂ ಹಾಕಿಕೊಂಡು ಘೋಷಣೆ ಕೂಗಿದರು. ಈ ಪ್ರಕರಣ ಏನಾಯಿತು. ದೇಶದ ಬದ್ಧತೆ ನಮಗಿದೆಯಾ? ಅಥವಾ ಬಿಜೆಪಿ ಇದೆಯಾ? ಎಂದು ಪ್ರಶ್ನಿಸಿದರು.