March 29, 2026
Sunday, March 29, 2026
spot_img

ಕಲಬುರಗಿಯಲ್ಲಿ ಟೆನಿಸ್ ಜಿದ್ದಾಜಿದ್ದಿ: ರೋಚಕ ಟೈಬ್ರೇಕರ್‌ನಲ್ಲಿ ಗೆದ್ದು ಬೀಗಿದ ಭಾರತೀಯ ವನಿತೆಯರು

ಹೊಸದಿಗಂತ ಕಲಬುರಗಿ:

ನಗರದ ಚಂದ್ರಶೇಖರ ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಟಿಎಫ್ ಡಬ್ಲ್ಯೂ 35 ಮಹಿಳಾ ಓಪನ್ ಟೆನಿಸ್ ಟೂರ್ನಿಯು ಎರಡನೇ ದಿನವಾದ ಸೋಮವಾರ ತೀವ್ರ ಕುತೂಹಲಕ್ಕೆ ಸಾಕ್ಷಿಯಾಯಿತು. ಮುಖ್ಯ ಡ್ರಾದಲ್ಲಿ ಸ್ಥಾನ ಪಡೆಯಲು ನಡೆದ ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಆಟಗಾರ್ತಿಯರ ನಡುವೆ ಭಾರಿ ಪೈಪೋಟಿ ಏರ್ಪಟ್ಟಿತ್ತು.

ಅರುಣಕುಮಾರ್ ಲಕ್ಷ್ಮಿ ಪ್ರಭಾ ಅವರು ಮಾರಿಯಾ ಮಿಖೈಲೋವಾ ವಿರುದ್ಧ 6-2, 3-6, 10-6 ಅಂತರದಲ್ಲಿ ರೋಚಕ ಟೈಬ್ರೇಕ್ ಗೆಲುವು ಸಾಧಿಸಿ ಎಲ್ಲರ ಗಮನ ಸೆಳೆದರು.

ಬೆಲಾ ತಂಹಂಕರ ವಿರುದ್ಧ ನಡೆದ ಕಠಿಣ ಹೋರಾಟದಲ್ಲಿ ಲಕ್ಷ್ಮಿಸಿರಿ ದಂಡು 7-5, 3-6, 14-12 ಅಂತರದ ಅದ್ಭುತ ಜಯ ದಾಖಲಿಸಿದರು.

ಸಿಂಗಾಪುರದ ಇವಾ ಮೇರಿ ಡೆಸ್ವಿಗ್ನ್ಸ್ ಅವರು ಆಹಾನ್ ವಿರುದ್ಧ 6-0, 6-1 ರಿಂದ ಸುಲಭವಾಗಿ ಗೆದ್ದರೆ, ವಾಲೆರಿಯಾ ಸಾವಿನಿಖ್ ಅವರು ಸೌಮ್ಯ ರೋಂಡೆ ವಿರುದ್ಧ 6-4, 6-1 ಜಯ ಗಳಿಸಿದರು.

ಇತರ ಫಲಿತಾಂಶಗಳು:

ಕಾಶಿಶ್ ಭಾಟಿಯಾ: ಮಹಿಕಾ ಖನ್ನಾ ವಿರುದ್ಧ 7-6(4), 6-0 ಜಯ.

ಐಶ್ವರ್ಯ ಜಾಧವ್: ಶ್ರೀಮನ್ಯಾ ರೆಡ್ಡಿ ವಿರುದ್ಧ 6-3, 6-3 ಗೆಲುವು.

ಸಂದೀಪ್ತಿ ಸಿಂಗ್ ರಾವ್: ಕರ್ನಾಟಕದ ಸ್ನಿಗ್ಧಾ ಕಾಂತಾ ವಿರುದ್ಧ 6-4, 6-3 ಗೆಲುವು.

ಅನ್ನಾ ಸೆಡಿಶೇವಾ: ಯಶಸ್ವಿನಿ ಪನ್ವಾರ್ ವಿರುದ್ಧ 6-4, 6-2 ಜಯ.

ಸೋಮವಾರ ಮುಖ್ಯ ಡ್ರಾ ಅಧಿಕೃತವಾಗಿ ಪ್ರಕಟವಾಗಿದ್ದು, ಇಂದಿನಿಂದ ಕಲಬುರಗಿಯ ಕ್ರೀಡಾಭಿಮಾನಿಗಳಿಗೆ ವಿಶ್ವದರ್ಜೆಯ ಮಹಿಳಾ ಟೆನಿಸ್ ತಾರೆಯರ ಆಟವನ್ನು ಕಣ್ತುಂಬಿಕೊಳ್ಳುವ ಅವಕಾಶ ಲಭಿಸಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !