June 13, 2026
Saturday, June 13, 2026
spot_img

Weight Loss Myths | ಈ ತಪ್ಪು ಕಲ್ಪನೆಗಳೇ ನಿಮ್ಮ ತೂಕ ಕಡಿಮೆಯಾಗದಿರೋದಕ್ಕೆ ಕಾರಣ ಗೊತ್ತಾ

ತೂಕ ಇಳಿಸಿಕೊಳ್ಳಬೇಕು ಅನ್ನೋ ಆಸೆ ಎಲ್ಲರಲ್ಲೂ ಇರುತ್ತದೆ. ಆದರೆ ಅದಕ್ಕೆ ಸಂಬಂಧಿಸಿದ ಅನೇಕ ತಪ್ಪು ಕಲ್ಪನೆಗಳು (ಮಿಥ್ಸ್) ಜನರನ್ನು ಗೊಂದಲಕ್ಕೆ ತಳ್ಳಿಬಿಡುತ್ತವೆ. ಸರಿಯಾದ ಮಾಹಿತಿಯಿಲ್ಲದೆ ಡಯಟ್ ಅಥವಾ ವ್ಯಾಯಾಮ ಮಾಡಿದರೆ ಫಲಿತಾಂಶ ಸಿಗೋದಿಲ್ಲ. ಹೀಗಾಗಿ ತೂಕ ಇಳಿಕೆ ಬಗ್ಗೆ ಇರುವ ಕೆಲವು ಸಾಮಾನ್ಯ ಮಿಥ್ಸ್‌ಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ.

  • ಕಡಿಮೆ ತಿನ್ನೋದ್ರಿಂದಲೇ ತೂಕ ಇಳಿಯುತ್ತದೆ: ಅನೇಕರು ಊಟವನ್ನು ತುಂಬಾ ಕಡಿಮೆ ಮಾಡಿದರೆ ತೂಕ ಬೇಗ ಕಡಿಮೆಯಾಗುತ್ತೆ ಎಂದು ಭಾವಿಸುತ್ತಾರೆ. ಆದರೆ ಇದು ತಪ್ಪು. ದೇಹಕ್ಕೆ ಅಗತ್ಯ ಪೋಷಕಾಂಶ ಸಿಗದಿದ್ದರೆ ಮೆಟಾಬಾಲಿಸಂ ಕುಸಿದು ತೂಕ ಇಳಿಕೆ ನಿಧಾನವಾಗುತ್ತದೆ.
  • ಕಾರ್ಬೊಹೈಡ್ರೇಟ್ ತಿನ್ನಬೇಡಿ: ಅಕ್ಕಿ, ರೊಟ್ಟಿ ತಿನ್ನಬಾರದು ಎನ್ನುವುದು ಸಾಮಾನ್ಯ ಮಿಥ್. ಆದರೆ ದೇಹಕ್ಕೆ ಶಕ್ತಿ ನೀಡಲು ಕಾರ್ಬ್ಸ್ ಅಗತ್ಯ. ಸರಿಯಾದ ಪ್ರಮಾಣದಲ್ಲಿ ತೆಗೆದುಕೊಳ್ಳುವುದು ಮುಖ್ಯ.
  • ಫ್ಯಾಟ್ ಫುಡ್ ಎಲ್ಲವೂ ಕೆಟ್ಟದು: ಎಲ್ಲ ಫ್ಯಾಟ್ ಕೆಟ್ಟದಲ್ಲ. ಉತ್ತಮ ಕೊಬ್ಬು (ಗುಡ್ ಫ್ಯಾಟ್) ದೇಹಕ್ಕೆ ಅಗತ್ಯ. ಬಾದಾಮಿ, ಬೀಜಗಳು ಮುಂತಾದವು ಆರೋಗ್ಯಕರ.
  • ಹೆಚ್ಚು ವ್ಯಾಯಾಮ ಮಾಡಿದ್ರೆ ಬೇಗ ತೂಕ ಇಳಿಯುತ್ತೆ: ಅತಿಯಾಗಿ ವ್ಯಾಯಾಮ ಮಾಡಿದರೆ ದೇಹಕ್ಕೆ ಒತ್ತಡ ಹೆಚ್ಚುತ್ತದೆ. ಸಮತೋಲನದ ವ್ಯಾಯಾಮ ಮತ್ತು ಸರಿಯಾದ ಆಹಾರ ಮುಖ್ಯ.
  • ಸಪ್ಲಿಮೆಂಟ್ಸ್ ತೆಗೆದುಕೊಂಡರೆ ತೂಕ ಇಳಿಯುತ್ತದೆ: ಮಾರುಕಟ್ಟೆಯಲ್ಲಿ ಸಿಗುವ ಪೌಡರ್ ಅಥವಾ ಮಾತ್ರೆಗಳಿಂದ ತೂಕ ಇಳಿಯುತ್ತದೆ ಅನ್ನೋದು ಸುಳ್ಳು. ಒಂದು ವೇಳೆ ತೂಕ ಕಡಿಮೆಯಾದರೂ ಕೆಲವೇ ಸಮಯದಲ್ಲಿ ಆ ತೂಕ ವಾಪಾಸ್ ಬಂದುಬಿಡುತ್ತದೆ. ಹೀಗಾಗಿ ನೈಸರ್ಗಿಕ ವಿಧಾನವೇ ಉತ್ತಮ.

ಒಟ್ಟಿನಲ್ಲಿ, ತೂಕ ಇಳಿಕೆಗಾಗಿ ಸರಿಯಾದ ಡಯಟ್, ನಿಯಮಿತ ವ್ಯಾಯಾಮ ಮತ್ತು ಸಹನೆ ಬಹಳ ಮುಖ್ಯ. ತಪ್ಪು ಕಲ್ಪನೆಗಳಿಂದ ದೂರವಿದ್ದು ಆರೋಗ್ಯಕರ ಜೀವನಶೈಲಿ ಅನುಸರಿಸಿದರೆ ಮಾತ್ರ ಉತ್ತಮ ಫಲಿತಾಂಶ ಸಿಗುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !