ಕಾಂಗ್ರೆಸ್ ನಲ್ಲಿ ಮತ್ತೆ ಶುರುವಾಯಿತು ತಲೆ ಬಿಸಿ: ದಲಿತರಿಗೆ ಸಿಎಂ ಸ್ಥಾನ ಕೊಡುವಂತೆ ಕೆ.ಹೆಚ್.ಮುನಿಯಪ್ಪ ಒತ್ತಾಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮುಂದಿನ ದಿನಗಳಲ್ಲಿ ದಲಿತರಿಗೆ ಸಿಎಂ ಸ್ಥಾನ ಕೊಡುವಂತೆ ಕೆ.ಹೆಚ್.ಮುನಿಯಪ್ಪ ಒತ್ತಾಯಿಸಿದ್ದಾರೆ.

ಯಾವುತ್ತು ಎಲ್ಲಾ ಸಮುದಾಯಗಳಿಗೂ ಸಮಾನ ಪ್ರಾತಿನಿತ್ಯ ಕೊಡುವುದು ಕಾಂಗ್ರೆಸ್ ಸರ್ಕಾರ ಮಾತ್ರ. ನಾನೇ ಹೈಕಮಾಂಡ್‌‌ಗೆ ಹೇಳಿದ್ದೀನಿ ಧರ್ಮಸಿಂಗ್ ಆದ ನಂತರ ಸಾಕಷ್ಟು ಜನ ಹಿರಿಯರು ಪಕ್ಷದಲ್ಲಿ ಇದ್ದಾರೆ. ಮಲ್ಲಿಕಾರ್ಜುನ್ ಖರ್ಗೆ ಅಂತವರನ್ನ ಸಿಎಂ ಮಾಡಬೇಕು ಅಂತ‌ ಹೇಳಿದ್ದೆ ಎಂದರು.

ಸಿದ್ದರಾಮಯ್ಯ ಅವರು ಸಿಎಂ ಆದಾಗ ಪರಮೇಶ್ವರ್ ಅವರು ಅಧ್ಯಕ್ಷರಾಗಿದ್ರು. ಆಕಸ್ಮಿಕವಾಗಿ ಅವರು ಸೋತ ನಂತರ ಅವರನ್ನ ಡಿಸಿಎಂ ಮಾಡಬೇಕು ಅಂತ ನಾನೇ ಒತ್ತಾಯ ಮಾಡಿದ್ದೆ. ದಲಿತರಲ್ಲಿ‌ ಯಾರಿಗಾದ್ರು ಕೊಡಬೇಕು ಅನ್ನೋದು ಇದೆ. ಆದರೆ, ಆ ಸಮಯ ಇನ್ನೂ ಬಂದಿಲ್ಲ. ಒಬ್ಬ ಸಿಎಂ ಮತ್ತು ಅಧ್ಯಕ್ಷರು ಇರುವಾಗ ಅದನ್ನ ನಾವು ಹೇಳುವ ಹಾಗಿಲ್ಲ. ಯಾವ ಸಮಯಕ್ಕೆ ಅಧ್ಯಕ್ಷ ಮತ್ತು ಸಿಎಂ ಬದಲಾವಣೆ ಮಾಡಬೇಕು ಅಂತ ಹೈಕಮಾಂಡ್ ತೀರ್ಮಾನ ಮಾಡುತ್ತೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!