ಹೊಸದಿಗಂತ ಡಿಜಿಟಲ್ ಡೆಸ್ಕ್:
ಜೈಪುರ್-ಅಜ್ಮೇರ್ ರಸ್ತೆಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಐದು ಮಂದಿ ಸಜೀವ ದಹನವಾಗಿದ್ದಾರೆ. ನಿಂತಿದ್ದ ಎರಡು ಟ್ರಕ್‌ಗೆ ಮತ್ತೊಂದು ಟ್ರಕ್ ಬಂದು ಡಿಕ್ಕಿ ಹೊಡೆದಿದ್ದು, ಘರ್ಷಣೆಯಿಂದಾಗಿ ಬೆಂಕಿ ಹೊತ್ತಿಕೊಂಡಿದೆ. ಇದರಿಂದಾಗಿ ಮೂರೂ ವಾಹನಗಳಿಗೆ ಹೊತ್ತಿದೆ. ಐವರು ಹಾಗೂ 12 ಪ್ರಾಣಿಗಳೂ ಸಜೀವ ದಹನವಾಗಿವೆ.
ದುಡುಪ್ರದೇಶದಲ್ಲಿ ಅಪಘಾತ ಸಂಭವಿಸಿದ್ದು, ಅಪಘಾತವಾದ ನಂತರವೂ ಬೆಂಕಿ ಉರಿಯುತ್ತಲೇ ಇದ್ದು, ಪವನ್, ಸಂಜು, ಧರಮ್‌ವೀರ್, ಜಾನ್ ವಿಜಯ್ ಹಾಗೂ ಬಿಜ್ಲಿ ಎನ್ನುವವರು ಮೃತಪಟ್ಟಿದ್ದಾರೆ.
ಹರಿಯಾಣದಿಂದ ಪುಣೆಗೆ ಜಾನುವಾರುಗಳನ್ನು ಸಾಗಿಸುತ್ತಿದ್ದ ಟ್ರಕ್ ನಿಂತಿದ್ದ ಎರಡು ಟ್ರಕ್‌ಗೆ ಡಿಕ್ಕಿಯಾಗಿದೆ. ನಿಂತಿದ್ದ ವಾಹನಗಳಲ್ಲಿ ನೂಲಿನ ಬಂಡಲ್ ಹಾಗೂ ಪ್ಲಾಸ್ಟಿಕ್ ಕವರ್‌ಗಳಿದ್ದವು. ಇದರಿಂದಾಗಿ ಬೆಂಕಿ ಹೆಚ್ಚಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.