ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಮೇಲೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಒಬ್ಬರು ಮೃತಪಟ್ಟಿದ್ದಾರೆ.
ರಾತ್ರಿ ಬೊಲೆರೊ ಪಿಕಪ್ ವಾಹನಕ್ಕೆ ಹಿಂಬದಿಯಿಂದ ಬಂದು ಕ್ಯಾಂಟರ್ ಗುದ್ದಿದೆ. ಗುದ್ದಿದ ರಭಸಕ್ಕೆ ಬೊಲೆರೊ ಪಿಕಪ್ ವಾಹನದಲ್ಲಿದ್ದ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಬೊಲೊರೊ ಚಾಲಕ ಹರೀಶ್ ಹಾಗೂ ಕ್ಯಾಂಟರ್ ಚಾಲಕ ಮನ್ಸೂರ್‌ಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಫ್ಲೈ ಓವರ್ ಬಳಿ ಬೊಲೆರೊ ವಾಹನ ಕೆಟ್ಟು ನಿಂತಿತ್ತು, ಹೀಗಾಗಿ ಚಾಲಕ ಕರೆ ಮಾಡಿ ಟೋಯಿಂಗ್‌ಗೆ ವ್ಯವಸ್ಥೆ ಮಾಡಿಕೊಂಡಿದ್ದ. ಟೋಯಿಂಗ್‌ನಲ್ಲಿದ್ದ ವಾಹನಕ್ಕೆ ಕ್ಯಾಂಟರ್ ಗುದ್ದಿದ್ದು, ಬೊಲೆರೊದಲ್ಲಿದ್ದ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಇನ್ನು ಕ್ಯಾಂಟರ್‌ನಲ್ಲಿ ಚಾಲಕ ಮನ್ಸೂರ್ ಸಿಕ್ಕಿಹಾಕಿಕೊಂಡಿದ್ದು, ಕ್ರೇನ್ ಮೂಲಕ ಅವರನ್ನು ಹೊರತಂದು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದಿಂದಾಗಿ ಫ್ಲೈಓವರ್‌ನಲ್ಲಿ ಎರಡು ಗಂಟೆಗಳು ಟ್ರಾಫಿಕ್ ಜಾಮ್ ಉಂಟಾಗಿತ್ತು.