ಭೀಕರ ಅಫಘಾತ: ಆಸ್ಪತ್ರೆಗೆ ಎಸ್ಪಿ ಇಶಾ ಪಂತ್ ಭೇಟಿ

ಹೊಸ ದಿಗಂತ ವರದಿ, ಕಲಬುರಗಿ:

ಗೋವಾದಿಂದ ಹೈದ್ರಾಬಾದ್‌,ಗೆ ತೆರಳುತ್ತಿದ್ದ ಖಾಸಗಿ ಬಸ್‌ ಚಾಲಕನ ನಿಯಂತ್ರಣ ತಪ್ಪಿ ಕಂದಕ್ಕೆ ಜಾರಿ ಹೊತ್ತು ಉರಿದು 7 ಜನರು ಸಜೀವ ದಹನವಾದ ಘಟನೆ ಶುಕ್ರವಾರ ನಸುಕಿನ ಜಾವ ನಡೆದಿದೆ.
ಹೈದ್ರಾಬಾದ್‌ನ ಸಿಕ್ಕಿಂದರಾಬಾದ್‌ ಸಿಟಿಯ ಅಲ್ವಾಲ್‌ ಮೂಲದ 30 ಜನರು ಬಸ್‌ನಲ್ಲಿದ್ದರು. ಅವರಲ್ಲಿ ಸ್ಥಳದಲ್ಲಿಯೇ ಸರಳಾದೇವಿ(32), ಅರ್ಜುನ್‌ ಕುಮಾರ(37), ಶಿವಕುಮಾರ(35), ರವಾಲಿ(30), ದಿಕ್ಷೀತ್‌(9), ಅನೀತಾ(40), ವಿವಾನ್‌(2) ಸುಟ್ಟು ಸಜೀವ ದಹನವಾಗಿ ಮೃತಪಟ್ಟಿದ್ದಾರೆ.
14 ಜನರು ಕಲಬುರಗಿಯ ಯುನೈಟೆಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆಸ್ಪತ್ರೆಗೆ ಎಸ್ಪಿ ಇಶಾ ಪಂತ್ ಭೇಟಿ
ಕಮಲಾಪುರ ಹೊರವಲಯದಲ್ಲಿ ಬೆಳಂಬೆಳಿಗ್ಗೆ ನಡೆದ ಭೀಕರ ಅಪಘಾತದಲ್ಲಿ ಗಾಯಗೊಂಡವರನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲು ಮಾಡಿದ್ದು, ಅವರ ಆರೋಗ್ಯವನ್ನು ವಿಚಾರಣೆ ಮಾಡಲು ಕಲಬುರಗಿ ಪೋಲಿಸ್ ವರಿಷ್ಠಾಧಿಕಾರಿ ಇಶಾ ಪಂತ ಆಸ್ಪತ್ರಗೆ ಭೇಟಿ ನೀಡಿದರು. ಗಾಯಾಳುಗಳಾದ ಸಿಕಿಂದರಾಬಾದ್,ನ ರಾಜೇಶ್ವರ (40), ಸ್ನೇಹಲತಾ (35), ಅರ್ಚನಾ (37), ಕಲ್ಪನಾ (38), ಮಾನಸಾ (17), ಧನು (30), ರಘು (39), ಅಮೃತ ಪಾಟೀಲ (40), ತರುಣ (19), ದಿವ್ಯಾಂಶ (8), ಸುಧಾ ಸರ್ವೇ (46) ಎಂಬುವವರಿಗೆ ಗಾಯಗಳಾಗಿದ್ದು, ಖುದ್ದು ಎಸ್ಪಿ ಇಶಾ ಪಂತ ಭೇಟಿ ಮಾಡಿ ಆರೋಗ್ಯದ ಬಗ್ಗೆ ವಿಚಾರಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!