ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ನೌಕಾಪಡೆಯ ಪ್ರಮುಖ ಯುದ್ಧನೌಕೆಯಾದ ಐಎನ್‌ಎಸ್ ಬ್ರಹ್ಮಪುತ್ರದಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿದೆ.
ನೌಕೆಯ ಪ್ರಮುಖ ಭಾಗಗಳು ಸುಟ್ಟು ಕರಕಲಾಗಿದ್ದು, ನೌಕೆಯಲ್ಲಿದ್ದವರ ಪೈಕಿ ಒಬ್ಬ ನಾವಿಕ ನಾಪತ್ತೆಯಾಗಿದ್ದಾರೆ
‘ಒಬ್ಬ ಕಿರಿಯ ನಾವಿಕ ನಾಪತ್ತೆಯಾಗಿದ್ದು, ರಕ್ಷಣೆಗೆ ಕಾರ್ಯಾಚರಣೆ ನಡೆಸಲಾಗುತ್ತಿದೆ. ಆದಾಗ್ಯೂ, ನೌಕೆಯಲ್ಲಿದ್ದ ಎಲ್ಲ ಸಿಬ್ಬಂದಿಯೂ ಸುರಕ್ಷಿತರಾಗಿದ್ದಾರೆ’ ಎಂಬುದಾಗಿ ನೌಕಾಪಡೆಯು ಪ್ರಕಟಣೆ ತಿಳಿಸಿದೆ.
ಮುಂಬೈನಲ್ಲಿರುವ ನೌಕಾಪಡೆಯ ನೌಕಾನೆಲೆಯಲ್ಲಿ ಕ್ಷಿಪಣಿಗಳನ್ನು ಉಡಾಯಿಸಬಹುದಾದ ಸಾಮರ್ಥ್ಯ ಇರುವ ಯುದ್ಧನೌಕೆಯ ನಿರ್ವಹಣೆ ಮಾಡಲಾಗುತ್ತಿತ್ತು. ಸಿಬ್ಬಂದಿಯು ಯುದ್ಧ ನೌಕೆಯ ತಪಾಸಣೆ, ಸಣ್ಣ-ಪುಟ್ಟ ದುರಸ್ತಿಯಲ್ಲಿ ತೊಡಗಿದ್ದರು. ಇದೇ ವೇಳೆ ಅಗ್ನಿ ದುರಂತ ಸಂಭವಿಸಿದೆ. ಅಗ್ನಿಯ ಕೆನ್ನಾಲಗೆಗೆ ನೌಕೆಯ ಪ್ರಮುಖ ಭಾಗಗಳು ಸುಟ್ಟಿವೆ. ಇದೇ ವೇಳೆ ಒಬ್ಬ ನಾವಿಕ ನಾಪತ್ತೆಯಾಗಿದ್ದಾನೆ. ಆತನಿಗಾಗಿ ತೀವ್ರ ಪ್ರಮಾಣದಲ್ಲಿ ಶೋಧ ನಡೆದಿದೆ ಎಂದು ನೌಕಾಪಡೆಯು ಮಾಹಿತಿ ನೀಡಿದೆ.
ಮುಂಬೈನ ನೌಕಾನೆಲೆಯಲ್ಲಿ ಸೋಮವಾರ (ಜುಲೈ 22) ಬೆಳಗ್ಗೆ ಅಗ್ನಿ ಅವಘಡ ಸಂಭವಿಸಿದೆ. ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿಯು ಬೆಂಕಿಯ ಕೆನ್ನಾಲಗೆಯು ಬಂದರಿನ ಬೇರೆ ಹಡಗುಗಳಿಗೂ ವ್ಯಾಪಿಸದಂತೆ ನೋಡಿಕೊಂಡರು. ಸಿಬ್ಬಂದಿಯು ಯುದ್ಧನೌಕೆಯನ್ನು ತಪಾಸಣೆ ಮಾಡುವಾಗ ಅವಘಡ ಸಂಭವಿಸಿದೆ. ದುರಂತಕ್ಕೆ ನಿಖರ ಕಾರಣ ಏನು ಎಂಬುದು ಗೊತ್ತಾಗಿಲ್ಲ. ಪ್ರಕರಣದ ಕುರಿತು ತನಿಖೆ ನಡೆಸಲಾಗುತ್ತದೆ ಎಂದು ನೌಕಾಪಡೆ ತಿಳಿಸಿದೆ.
ಷಡ್ಯಂತ್ರದ ಸಾಧ್ಯತೆ ಕೂಡಾ ಇರಬಹುದು.ಮತಾಂಧರ ಮತ್ತು ವಿರೋಧೀ INDIA ಒಕ್ಕೂಟದ ನಡುವೆ ಅಪವಿತ್ರ ಮೈತ್ರಿ/
ಹೊಂದಾಣಿಕೆ ದೇಶವ್ಯಾಪಿ ದುರಂತಗಳನ್ನು ಯೋಜಿಸಿರಲೂ ಬಹುದು.ವರ್ಷದ ಹಿಂದೆ ನಡೆದ ರೈಲ್ವೆ ಸಿಗ್ನಲಿಂಗ್ ಅವಾಂತರ ದ ನೆನಪಿನ್ನೂ ಹಸಿರಾಗಿದೆ. ಮಣಿಪುರ ಕ್ಷೋಭೆ ಕೂಡಾ ಇಂತಹದೇ ವ್ಯವಸ್ಥಿತ ಹುನ್ನಾರೇ ಅಲ್ಲವೇ.