ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಣಿಪುರದಲ್ಲಿ ಹಿಂಸಾಚಾರ ಬೂದಿಮುಚ್ಚಿದ ಕೆಂಡದಂತಿದ್ದು, ಇದೀಗ ವ್ಯಕ್ತಿಯನ್ನು ಜೀವಂತ ದಹಿಸಿದ ವಿಡಿಯೋವೊಂದು ವೈರಲ್ ಆಗಿದೆ.
ಈ ಹಿಂದೆ ಮಹಿಳೆಯರ ಮೇಲೆ ಅತ್ಯಾಚಾರ ಎಸಗಿ ಬೆತ್ತಲೆ ಮೆರವಣಿಗೆ ಮಾಡಿದ್ದ ವಿಡಿಯೋ ವೈರಲ್ ಆಗಿತ್ತು. ಇದೀಗ ವ್ಯಕ್ತಿಯೊಬ್ಬನಿಗೆ ಬೆಂಕಿ ಹಚ್ಚಿದ್ದು, ಬಿಸಿಯಲ್ಲಿ ಆತ ಬೆಂದು, ನರಳಾಡಿ ಮೃತಪಟ್ಟ ಭಯಾನಕ ವಿಡಿಯೋ ವೈರಲ್ ಆಗಿದೆ.
ಈ ಬಗ್ಗೆ ರಾಜ್ಯ ಭದ್ರತಾ ಸಲಹೆಗಾರ ಕುಲದೀಪ್ ಸಿಂಗ್ ಮಾತನಾಡಿದ್ದು, ವಿಡಿಯೋ ನಿಜವಾದ್ದು ಎಂದು ಹೇಳಿದ್ದಾರೆ. ಸಾಕಷ್ಟು ಬಿಗಿ ಭದ್ರತೆ ಹಾಗೂ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಈಗ ವೈರಲ್ ಆಗಿರುವ ವಿಡಿಯೋ ಮೇ ತಿಂಗಳಿನಲ್ಲಿ ನಡೆದಿದೆ. ವಿಡಿಯೋದಲ್ಲಿ ಯಾರ ಮುಖವೂ ಕಾಣುವುದಿಲ್ಲ, ಬರೀ ಕಾಲುಗಳು ಕಾಣಿಸುತ್ತವೆ, ಗುಂಡಿನ ಸದ್ದು ಕೇಳಿಸುತ್ತಿದೆ ಎಂದಿದ್ದಾರೆ.