ಹೊಸದಿಗಂತ ಡಿಜಿಟಲ್ ಡೆಸ್ಕ್:
ಗಾಜಾ ಸ್ಟ್ರಿಪ್ಟ್‌ನಲ್ಲಿ ಆಹಾರಕ್ಕಾಗಿ ಕಾಯುವಾಗ ಇಸ್ರೇಲ್ ಶೆಲ್ ದಾಳಿ ನಡೆಸಿದ್ದು, ಪ್ಯಾಲೆಸ್ತೀನ್‌ನ 20 ಮಂದಿ ಮೃತಪಟ್ಟಿದ್ದಾರೆ.
ಶೆಲ್ ದಾಳಿಯಿಂದಾಗಿ 155 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಹಲವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಅಲ್ಲಿನ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಈಗಾಗಲೇ ಇಸ್ರೇಲ್ ಹಾಗೂ ಪ್ಯಾಲೆಸ್ತೀನ್‌ನ ಯುದ್ಧದಿಂದ ಗಾಜಾ ಸ್ಟ್ರಿಪ್ ನಾಶವಾಗಿದೆ. ಜನರು ತಿನ್ನಲು ಆಹಾರವಿಲ್ಲದೆ ಪರದಾಡುತ್ತಿದ್ದಾರೆ. ಇದಕ್ಕಾಗಿ ಟ್ರಕ್‌ಗಳ ಮೂಲಕ ಆಹಾರ ತರಲಾಗಿತ್ತು. ಇದನ್ನು ಪಡೆಯಲು ನೂರಾರು ಮಂದಿ ಕ್ಯೂನಲ್ಲಿ ನಿಂತಿದ್ದರು.
ಹೆಚ್ಚಿನ ಜನರು ಒಂದೇ ಕಡೆ ಇರುವುದರ ಲಾಭ ಪಡೆದ ಇಸ್ರೇಲ್ ಶೆಲ್ ದಾಳಿ ನಡೆಸಿದೆ.