ಹೊಸ ದಿಗಂತ ಡಿಜಿಟಲ್ ಡೆಸ್ಕ್;
ಚೀನಾದ ಬಂದರು ನಗರಿ ಕ್ವಿಂಗ್ಡಾವೊದಲ್ಲಿ ನಡೆದ ಶಾಂಘೈ ಸಹಕಾರ ಸಂಸ್ಥೆ (SCO) ಸಭೆಯಲ್ಲಿ ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾಗವಹಿಸಿದ್ದು, ಈ ವೇಳೆ ಕೆಲವು ದೇಶಗಳು ತಮ್ಮ ನೀತಿಗಳಲ್ಲಿ ಗಡಿಯಾಚೆಗಿನ ಭಯೋತ್ಪಾದನೆಯನ್ನು (ಅಸ್ತ್ರವಾಗಿ ಬಳಸುತ್ತಿವೆ ಮತ್ತು ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿವೆ. ಅಂತಹ ದ್ವಿಮುಖ ನೀತಿಗಳನ್ನು ಕೊನೆಗೊಳಿಸುವುದು ಬಹಳ ಮುಖ್ಯ ಮತ್ತು SCOನಂತಹ ವೇದಿಕೆಯು ಅಂತಹ ಶಕ್ತಿಗಳನ್ನು ಬಹಿರಂಗವಾಗಿ ಟೀಕಿಸಬೇಕು ಎಂದು ಹೇಳಿದ್ದಾರೆ.
ಪಾಕಿಸ್ತಾನದ ವಿರುದ್ಧ ವಾಗ್ದಾಳಿ ನಡೆಸಿದ ಸಿಂಗ್, ಭಯೋತ್ಪಾದನೆ ಮತ್ತು ಶಾಂತಿ ಒಟ್ಟಿಗೆ ಇರಲು ಸಾಧ್ಯವಿಲ್ಲ ಎಂದು ಹೇಳಿದರು.
ಆಪರೇಷನ್ ಸಿಂದೂರದ ಮೂಲಕ ಭಾರತ ಭಯೋತ್ಪಾದನೆಯ ಮೇಲೆ ಯಾವುದೇ ಒತ್ತಡ ಅಥವಾ ರಾಜಿಗೆ ಸಿದ್ಧವಾಗಿಲ್ಲ ಎಂದು ಮತ್ತೊಮ್ಮೆ ತೋರಿಸಿದೆ. ನಮ್ಮ ಹೋರಾಟಕ್ಕೆ ಇತರೆ ದೇಶಗಳು ಬೆಂಬಲ ನೀಡಬೇಕು ಎಂದು ಆಗ್ರಹಿಸಿದರು.
SCOಯಲ್ಲಿ ಭಾರತ, ಚೀನಾ, ಪಾಕಿಸ್ತಾನ, ರಷ್ಯಾ ಸೇರಿದಂತೆ ಒಟ್ಟು ಹತ್ತು ಸದಸ್ಯ ರಾಷ್ಟ್ರಗಳಿದೆ.