ಭಯೋತ್ಪಾದನೆ ಹುಚ್ಚು ನಾಯಿ, ಪಾಕಿಸ್ತಾನ ಅದರ ದುಷ್ಟ ಪೋಷಕ: ಜಪಾನ್ ನಲ್ಲಿ ಅಭಿಷೇಕ್ ಬ್ಯಾನರ್ಜಿ ಆಕ್ರೋಶ

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಭಯೋತ್ಪಾದನೆ ಹುಚ್ಚು ನಾಯಿಯಾಗಿದ್ದರೆ, ಪಾಕಿಸ್ತಾನ ಅದರ ದುಷ್ಟ ಪೋಷಕ’ ಎಂದು ತೃಣಮೂಲ ಕಾಂಗ್ರೆಸ್ ಸಂಸದ ಅಭಿಷೇಕ್ ಬ್ಯಾನರ್ಜಿ ಪಾಕಿಸ್ತಾನದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಆಪರೇಷನ್ ಸಿಂಧೂರ್ ನಂತರ ಕೇಂದ್ರ ಸರ್ಕಾರ ಭಾರತದ ನಿಲುವು ಏನು ಎಂಬುದನ್ನು ಜಗತ್ತಿಗೆ ಮನವರಿಕೆ ಮಾಡಿಕೊಡಲು ವಿವಿಧ ದೇಶಗಳಿಗೆ ಸರ್ವಪಕ್ಷಗಳ ಸಂಸದರ ಏಳು ನಿಯೋಗಗಳನ್ನು ಕಳುಹಿಸಿದೆ.

ಇದೀಗ ಜಪಾನ್​​​​ಗೆ ಭೇಟಿ ನೀಡಿರುವ ಭಾರತದ ನಿಯೋಗದ ತೃಣಮೂಲ ಕಾಂಗ್ರೆಸ್ ಸಂಸದ ಅಭಿಷೇಕ್ ಬ್ಯಾನರ್ಜಿ ಪಾಕಿಸ್ತಾನವನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

ಭಾರತವು ಯಾರ ಭಯಕ್ಕೂ ಮಣಿಯುವುದಿಲ್ಲ. ಭಯೋತ್ಪಾದನೆಗೆ ತಲೆಬಾಗುವುದಿಲ್ಲ ಎಂದು ಹೇಳಿದರು. ಇದಕ್ಕಾಗಿ ಭಯೋತ್ಪಾದನೆಯನ್ನು ಎದುರಿಸಲು ಜಗತ್ತು ಒಟ್ಟಾಗಿ ಸೇರುವ ಅಗತ್ಯವಿದೆ ಎಂದರು.

ಭಾರತ ಪಾಕಿಸ್ತಾನದ ಮುಂದೆ ತಲೆಬಾಗುವುದಿಲ್ಲ, ನಿಮ್ಮ ತಪ್ಪು ಮಾಹಿತಿಯನ್ನು ಹಾಗೂ ಸತ್ಯವನ್ನು ಜಗತ್ತಿನ ಮುಂದೆ ತಿಳಿಸಲು ನಾವು ಇಲ್ಲಿಗೆ ಬಂದಿದ್ದೇವೆ. ನಾವು ಭಯಕ್ಕೆ ಮಣಿಯುವುದಿಲ್ಲ. ನಾನು ಭಾರತದಲ್ಲಿ ವಿರೋಧ ಪಕ್ಷದಲ್ಲಿರುವ ರಾಜಕೀಯ ವ್ಯಕ್ತಿ, ಆದರೆ ನನ್ನ ದೇಶದ ವಿಚಾರ ಬಂದಾಗ ನಾನು ಮಾತನಾಡುತ್ತೇವೆ ಎಂದು ಹೇಳಿದ್ದಾರೆ.

ಭಯೋತ್ಪಾದಕರು ಹುಚ್ಚು ನಾಯಿಯಾಗಿದ್ದರೆ, ಅವರನ್ನು ಸಾಕುವ ಪಾಕಿಸ್ತಾನ ನಾಯಿ ಎಂದು ಹೇಳಿದ್ದಾರೆ. ಈ ದುಷ್ಟ ಹ್ಯಾಂಡ್ಲರ್ ವಿರುದ್ಧ ಹೋರಾಡಲು ನಾವು ಮೊದಲು ಜಗತ್ತನ್ನು ಒಗ್ಗೂಡಿಸಬೇಕು. ಇಲ್ಲದಿದ್ದರೆ, ಈ ದುಷ್ಟ ಹ್ಯಾಂಡ್ಲರ್ ಹೆಚ್ಚು ಹುಚ್ಚು ನಾಯಿಗಳನ್ನು ಸಾಕುತ್ತಾರೆ ಎಂದು ಹೇಳಿದ್ದಾರೆ.

ಭಯೋತ್ಪಾದಕರನ್ನು ಎಡೆಮುರಿ ಕಟ್ಟಲು ಭಾರತ ಸಿದ್ಧವಿದೆ. ಹಾಗೂ ಈ ಎಲ್ಲದಕ್ಕೂ ನಾವು ಜವಾಬ್ದಾರರು ಎಂದು ಹೇಳಿದರೆ. ನಮ್ಮ ಎಲ್ಲಾ ದಾಳಿಗಳು ಮತ್ತು ಕ್ರಮಗಳು ಜವಾಬ್ದಾರಿಯುತವಾಗಿವೆ ಮತ್ತು ನಿಖರತೆ, ಇತರ ದೇಶಗಳಿಗೆ ತೊಂದರೆಯಾಗದಂತೆ ನೋಡಿಕೊಂಡಿದ್ದೇವೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!