ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಕೇರಳದಲ್ಲಿ ಭಯೋತ್ಪಾದನೆ ತಾಂಡವಿಸುವ ಷಡ್ಯಂತ್ರದ ಆರೋಪಿ, ಕಳೆದ ಕೆಲವು ಸಮಯದಿಂದ ತಲೆಮರೆಸಿಕೊಂಡು ವಿದೇಶಕ್ಕೆ ಪಲಾಯನಗೈಯಲು ಯತ್ನಿಸುತ್ತಿದ್ದ , ಐಎಸ್ ತೃಶೂರ್ ಘಟಕದ ನಾಯಕ ಸಯ್ಯದ್ ನಬೀಲ್ ಅಹಮದ್‌ನನ್ನು ,ಎನ್‌ಐಎ ಬುಧವಾರ ಚೆನ್ನೈನಿಂದ ಬಂಧಿಸಿತು. ಎನ್‌ಐಎಯ ದೇಶಭ್ರಷ್ಟರ ಸೆರೆಹಿಡಿವ ತಂಡವು ಬಂಧನ ಕಾರ್ಯಾಚರಣೆ ನಡೆಸಿತು.
ನೇಪಾಳಕ್ಕೆ ಪಲಾಯನ ಸಂಚು
ಕಳೆದ ಹಲವು ವಾರಗಳಿಂದ ಕರ್ನಾಟಕ ಮತ್ತು ತಮಿಳ್ನಾಡಿನ ವಿವಿಧೆಡೆಗಳಲ್ಲಿ ಅವಿತಿದ್ದ ಆರೋಪಿ ಅಹಮದ್, ನಕಲಿ ದಾಖಲೆ ಬಳಸಿ ನೇಪಾಳಕ್ಕೆ ಪರಾರಿಯಾಗುವ ಸಂಚು ಹೂಡಿದ್ದ. ನಕಲಿ ದಾಖಲೆಗಳು ಹಾಗೂ ಡಿಜಿಟಲ್ ಪರಿಕರಗಳನ್ನು ಆರೋಪಿ ಸಯ್ಯದ್ ನಬೀಲ್ ಅಹಮದ್ ವಶದಿಂದ ಸ್ವಾನಪಡಿಸಲಾಗಿದೆ. ಪ್ರಸ್ತುತ ಪ್ರಕರಣದಲ್ಲಿ ಜುಲೈನಿಂದೀಚೆಗೆ ಬಂತ ತೃತೀಯ ಆರೋಪಿಯೀತ.
ಪ್ರಕರಣದ ಇನ್ನೋರ್ವ ಆರೋಪಿ ಆಸಿಫ್ ಯಾನೆ ಮಥಿಲಾಕಥ್ ಕೊಡಯಿಲ್ ಅಶ್ರಫ್‌ನನ್ನು ಕಳೆದ ಜುಲೈನಲ್ಲಿ ತಮಿಳ್ನಾಡಿನ ಸತ್ಯಮಂಗಲಂನ ಅಡಗುದಾಣದಿಂದ ಎನ್‌ಐಎ ಬಂಸಿತ್ತು. ಐಎಸ್‌ನ ತೃಶೂರ್ ಘಟಕವು ಕೇರಳದಲ್ಲಿ ಭಯೋತ್ಪಾದಕ ಕೃತ್ಯಗಳನ್ನು ನಡೆಸುವ ಪ್ಲ್ಯಾನ್ ಹೊಂದಿದೆ ಎಂಬ ವಿಶ್ವಸನೀಯ ಮಾಹಿತಿ ಆಧಾರದಲ್ಲಿ ಎನ್‌ಐಎಯು ಜು.11ರಂದು ಐಪಿಸಿ ಮತ್ತು ಯುಎ(ಪಿ)ಕಾಯಿದೆಯಡಿ ಪ್ರಕರಣ ದಾಖಲಿಸಿತ್ತು. ಆರೋಪಿಗಳು, ಐಎಸ್‌ಗೆ ಯುವಕರ ನೋಂದಣಿ ಜತೆ ಐಎಸ್‌ನ ದೇಶದ್ರೋಹಿ ಚಟುವಟಿಕೆಗಳಿಗಾಗಿ , ದರೋಡೆ ಸಹಿತ ಕಾನೂನುಬಾಹಿರ ಚಟುವಟಿಕೆಗಳ ಮೂಲಕ ಹಣ ಸಂಗ್ರಹಿಸುತ್ತಿದ್ದರು ಎಂದು ಎನ್‌ಐಎ ಮೂಲಗಳು ತಿಳಿಸಿವೆ.