ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಳೆದ ವರ್ಷ ನವೆಂಬರ್‌ನಲ್ಲಿ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಮಂಗಳೂರು ಕುಕ್ಕರ್ ಸ್ಫೋಟದ ಮಾಸ್ಟರ್ ಮೈಂಡ್ ಲಷ್ಕರ್-ಎ-ತೈಬಾ ಸಂಘಟನೆಯ ಅಫ್ಸರ್ ಪಾಷಾ ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕುಕ್ಕರ್ ಬಾಂಬ್ ತಯಾರಿಸಲು ಖುದ್ದು ಬಾಂಗ್ಲಾದೇಶದಿಂದ ತರಬೇತಿ ಪಡೆದು ಬಂದಿದ್ದ ಪಾಷಾ, ಆರೋಪಿಗಳಿಗೆ ಬಾಂಬ್ ತಯಾರಿಕೆ ಟ್ರೈನಿಂಗ್ ನೀಡಿದ್ದ. ಆರೋಪಿಗಳು ಕರ್ನಾಟಕದಲ್ಲಿ ಜೈಲಿನಲ್ಲಿದ್ದಾಗಲೇ ತರಬೇತಿ ನೀಡಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ.
ನಿಷೇಧಿತ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಈ ಹಿಂದೆ ಪಾಷಾ ಬ್ಯಾಂಕ್ ಅಕೌಂಟ್‌ಗೆ ಐದು ಲಕ್ಷ ರೂಪಾಯಿ ವರ್ಗಾವಣೆ ಮಾಡಿರುವ ವಿಷಯವೂ ತನಿಖೆಯಿಂದ ತಿಳಿದು ಬಂದಿದೆ.
ಆರೋಪಿ ಮೊಹಮ್ಮದ್ ಶಾರಿಕ್‌ಗೆ ಕುಕ್ಕರ್ ಬಾಂಬ್ ತಯಾರಿಸಲು ಹೇಳಿಕೊಟ್ಟ ಪಾಷಾ ಈ ಬ್ಲಾಸ್ಟ್‌ನ ಮಾಸ್ಟರ್ ಮೈಂಡ್ ಎಂದು ಅಧಿಕಾರಿಗಳು ಹೇಳಿದ್ದಾರೆ. ಕಳೆದ ವರ್ಷ ನವೆಂಬರ್ 19ರಂದು ಮಂಗಳೂರಿನ ಆಟೋರಿಕ್ಷಾದಲ್ಲಿ ಸ್ಫೋಟ ಸಂಭವಿಸಿತ್ತು.