ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ಪಾಕಿಸ್ತಾನ ಅತಿಕ್ರಮಿತ ಕಾಶ್ಮೀರ ಹಾಗೂ ಪಾಕಿಸ್ತಾನದ ಒಟ್ಟು 9 ಪ್ರದೇಶಗಳಲ್ಲಿ ಉಗ್ರರ ನೆಲೆಗಳ ಮೇಲೆ ವೈಮಾನಿಕ ದಾಳಿ ನಡೆಸಿದೆ.
ಭಾರತದ ಮೇಲಿನ ಅನೇಕ ದಾಳಿಗಳ ಹಿಂದೆ ಇದ್ದ ಈ ಭಯೋತ್ಪಾದಕ ಶಿಬಿರಗಳನ್ನು ಗುರಿಯಾಗಿಸಿ ದಾಳಿ ಮಾಡಲಾಗಿದೆ. 4 ಜೈಶ್-ಎ-ಮೊಹಮ್ಮದ್, 3 ಲಷ್ಕರ್-ಎ-ತೈಬಾ ಮತ್ತು 2 ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕ ಅಡಗುತಾಣಗಳನ್ನು ಗುರಿಯಾಗಿಸಲಾಗಿತ್ತು ಎನ್ನಲಾಗಿದೆ.
ಭೀಕರ ದಾಳಿಗೆ ಪಾಕ್ ತತ್ತರಿಸಿದ್ದು, ಉಗ್ರರ ತಾಣಗಳು ಧ್ವಂಸವಾಗಿರುವ ಫೋಟೊಗಳು ಇಲ್ಲಿವೆ..