ಜಮ್ಮ-ಕಾಶ್ಮೀರದ ಪೂಂಚ್’ನಲ್ಲಿ ಉಗ್ರರ ಅಡಗುತಾಣಗಳು ಪತ್ತೆ: ವೈರ್‌ಲೆಸ್ ರೇಡಿಯೋ ಸೆಟ್​ಗಳು ವಶಕ್ಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಭಾರತೀ ಸೇನಾ ಪಡೆಗಳು ಭಯೋತ್ಪಾದಕರ ಅಡಗುತಾಣಗಳನ್ನು ಪತ್ತೆಹಚ್ಚಿದ್ದು, 5 ಸುಧಾರಿತ ಸ್ಫೋಟಕ ಸಾಧನಗಳು ಮತ್ತು ಎರಡು ವೈರ್‌ಲೆಸ್ ರೇಡಿಯೋ ಸೆಟ್​ಗಳನ್ನು ವಶಪಡಿಸಿಕೊಂಡಿವೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

ಅರ್ಧ ಕೆಜಿಯಿಂದ ಐದು ಕೆಜಿ ತೂಕದ ಬಳಸಲು ಸಿದ್ಧವಾಗಿದ್ದ ಐಇಡಿಗಳನ್ನು ಸ್ಥಳದಲ್ಲೇ ನಾಶಪಡಿಸಲಾಗಿದೆ, ಈ ಮೂಲಕ ಗಡಿ ಜಿಲ್ಲೆಯಲ್ಲಿ ವಿಧ್ವಂಸಕ ಕೃತ್ಯ ಎಸಗುವ ಭಯೋತ್ಪಾದಕರ ಸಂಚನ್ನು ವಿಫಲಗೊಳಿಸಲಾಗಿದೆ ಎಂದು ಹೇಳಿದ್ದಾರೆ.

ಭಾನುವಾರ ಸಂಜೆ ಸುರಂಕೋಟ್‌ನ ಮರ್ಹೋಟೆ ಪ್ರದೇಶದ ಸುರಂತಲ್‌ನಲ್ಲಿ ಸೇನೆ ಮತ್ತು ಜಮ್ಮು-ಕಾಶ್ಮೀರ ಪೊಲೀಸರು ನಡೆಸಿದ ವಿಶೇಷ ಜಂಟಿ ಕಾರ್ಯಾಚರಣೆಯಲ್ಲಿ ಉಗ್ರರ ಅಡಗು ತಾಣಗಳನ್ನು ಪತ್ತೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಸ್ಟೀಲ್ ಬಕೆಟ್ ನಲ್ಲಿ 2 ಹಾಗೂ ಟಿಫಿನ್ ಬಾಕ್ಸ್ ಗಳಲ್ಲಿ ಮೂರು ಐಡಿಗಳನ್ನು ಇರಿಸಿರುವುದು ಕಂಡು ಬಂದಿದೆ. ಇದಲ್ಲದೆ, ಎರಡು ವೈರ್‌ಲೆಸ್ ಸೆಟ್‌ಗಳು, ಯೂರಿಯಾ ಹೊಂದಿರುವ ಐದು ಪ್ಯಾಕೆಟ್‌ಗಳು, ಐದು ಲೀಟರ್ ಗ್ಯಾಸ್ ಸಿಲಿಂಡರ್ 1, ಒಂದು ಬೈನಾಕ್ಯುಲರ್, ಮೂರು ಕ್ಯಾಪ್‌ಗಳು, ಮೂರು ಕಂಬಳಿಗಳು, ಪ್ಯಾಂಟ್ ಮತ್ತು ಪಾತ್ರೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!