ಯುಎಪಿಎ ಕಾಯ್ದೆಯಡಿ ಉಗ್ರ ರಾಣಾ ಅರೆಸ್ಟ್‌: ಮೊದಲ ಫೋಟೋ ರಿಲೀಸ್ ಮಾಡಿದ NIA

ಹೊಸದಿಗಂತ ಡಿಜಿಟಲ್ ಡೆಸ್ಕ್:

2008ರ ಮುಂಬೈ ಭಯೋತ್ಪಾದಕ ದಾಳಿಯ ಸಂಚುಕೋರ ಆರೋಪಿ ತಹಾವ್ವುರ್‌ ರಾಣಾನನ್ನು ಅಮೆರಿಕದಿಂದ ಗಡಿಪಾರು ಮಾಡಿದ ನಂತರ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಅಧಿಕಾರಿಗಳು ದಿಲ್ಲಿಗೆ ಕರೆತಂದಿದ್ದು, ಯುಎಪಿಎ (UAPA) ಕಾಯ್ದೆಯಡಿ ಬಂಧಿಸಲಾಗಿದೆ.

ದಿಲ್ಲಿಯ ಪಾಲಂ ಏರ್‌ಪೋರ್ಟ್‌ಗೆ ಬಂದಿಳಿಯುತ್ತಿದ್ದಂತೆ ಉಗ್ರ ನಿಗ್ರಯ ಕಾಯ್ದೆಯಡಿ ಅಧಿಕಾರಿಗಳು ಬಂಧಿಸಿದ್ದಾರೆ. ಮೋಡಲ್ ಫೋಟೋ ರಿಲೀಸ್ ಆಗಿದೆ.

64 ವರ್ಷ ವಯಸ್ಸಿನ ತಹವ್ವೂರ್‌ ರಾಣಾನ ಫೋಟೊ ರಿಲೀಸ್‌ ಆಗಿದೆ. ಎನ್‌ಐಎ ಅಧಿಕಾರಿಗಳ ಜೊತೆ ರಾಣಾ ಇರುವ ಫೋಟೊ ಬಹಿರಂಗಗೊಂಡಿದೆ.

https://x.com/NIA_India/status/1910348039774212163

ತಹಾವ್ವುರ್‌ ರಾಣಾ ಬಂದಿಳಿದ ನಂತರ ಮೊದಲ ಬಾರಿ ಪ್ರತಿಕ್ರಿಯಿಸಿದ ಎನ್ಐಎ ಅಧಿಕಾರಿಗಳು, “2008ರ ಮುಂಬೈ ದಾಳಿಯ ಪ್ರಮುಖ ಸಂಚುಕೋರನನ್ನು ಬಂಧಿಸಲು ಹಲವು ವರ್ಷಗಳ ನಿರಂತರ ಮತ್ತು ಸಂಘಟಿತ ಪ್ರಯತ್ನʼʼ ನಡೆಸಲಾಯಿತು ಎಂದಿದ್ದಾರೆ.

Image“ಹಸ್ತಾಂತರದ ಒಪ್ಪಂದದ ಅಡಿಯಲ್ಲಿ ಹಲವು ವರ್ಷಗಳ ಕಾಲ ರಾಣಾನನ್ನು ಅಮೆರಿಕದಲ್ಲಿ ನ್ಯಾಯಾಂಗ ಬಂಧನದಲ್ಲಿಡಲಾಗಿತ್ತು. ಈ ಕ್ರಮವನ್ನು ತಡೆಹಿಡಿಯಲು ರಾಣಾ ನಡೆಸಿದ ಎಲ್ಲ ಕಾನೂನು ಪ್ರಯತ್ನಗಳು ವಿಫಲವಾದ ಹಿನ್ನೆಲೆಯಲ್ಲಿ ಅಂತಿಮವಾಗಿ ಆತನನ್ನು ಹಸ್ತಾಂತರವಾಯಿತು” ಎಂದು ಎನ್‌ಐಎ ತಿಳಿಸಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!