ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಪಾಕ್ ಮೇಲೆ ಕಳೆದ ರಾತ್ರಿ ಭಾರತ ನಡೆಸಿದ ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಉಗ್ರ ಹಫೀಜ್ ಸಯೀದ್, ಮಸೂದ್ ಅಜರ್ ಸಾವನ್ನಪ್ಪಿದ್ದಾರೆಯೇ?
ಪಾಕ್ ಯಾವುದೇ ಆಧಿಕೃತ ಹೇಳಿಕೆ ನೀಡದಿದ್ದರೂ ಬಹಾವಲ್ಪುರದಲ್ಲಿರುವ ಮಸೂದ್ ಅಜರ್‌ನ ಪ್ರಧಾನ ಕಚೇರಿ ಉಡೀಸ್ ಆಗಿರುವ ಬೆನ್ನಲ್ಲೇ ಈ ಸಂಶಯ ಈಗ ಮತ್ತಷ್ಟು ದಟ್ಟವಾಗಿದೆ.
ದಾಳಿಯಲ್ಲಿ ಅದರ ಪ್ರಧಾನ ಕಚೇರಿ ಮತ್ತು ಮದರಸಾ ನಾಶವಾಗಿವೆ ಎಂದು ಪಾಕ್ ಮಾಧ್ಯಮಗಳು ಸ್ವತಃ ದೃಢಪಡಿಸಿವೆ. ಆಲ್ಲದೆ ಈ ದಾಳಿಯಲ್ಲಿ 50 ಜೈಶ್ ಭಯೋತ್ಪಾದಕರು ಸಾವನ್ನಪ್ಪಿದ್ದಾರೆ.