ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಡೀ ವಿಶ್ವವೇ ಬೆಚ್ಚಿ ಬೀಳುವಂಥ ದಾಳಿಯನ್ನು ಉಗ್ರರು ಪಹಲ್ಗಾಮ್‌ನಲ್ಲಿ ಮಾಡಿದ್ದರು. ಭೂಮಿ ಮೇಲಿನ ಸ್ವರ್ಗವಾದ ಕಾಶ್ಮೀರವನ್ನು ನೋಡಲು ಬಂದ ಟೂರಿಸ್ಟ್‌ಗಳ ಮೇಲೆ ಉಗ್ರರು ದಾಳಿ ಮಾಡಿದ್ದರು.
ಗಂಡ ಹೆಂಡತಿ ಬಳಿ ಬಂದು ನೀವು ಯಾವ ಧರ್ಮದವರು ಎಂದು ಕೇಳಿದ್ದರು. ಹಿಂದು ಎಂದ ತಕ್ಷಣ ಹಣೆಗೆ ಗುಂಡಿಟ್ಟು ಕೊಂದಿದ್ದರು. ಕೆಲವರಿಗೆ ಪ್ಯಾಂಟ್ ಬಿಚ್ಚಿಸಿನೋಡಿ ಕೊಂದಿದ್ದರು. ಕಣ್ಣಮುಂದೆಯೇ ಗಂಡಂದಿರನ್ನು ಕಳೆದುಕೊಂಡ ಹೆಣ್ಣುಮಕ್ಕಳು ನಮ್ಮನ್ನೂ ಕೊಂದುಬಿಡಿ ಎಂದು ಅಂಗಲಾಚಿದ್ದರು.
ʼನಿಮ್ಮ ಮೋದಿಗೆ ಹೇಳಿ ಹೋಗಿʼ ಎಂದು ಹೇಳಿದ ಉಗ್ರರು ಹೆಂಗಸರನ್ನು ಕೊಲ್ಲದೇ ಸುಮ್ಮನೆ ಬಿಟ್ಟಿದ್ದರು. ಪ್ರಧಾನಿ ಮೋದಿ ಸರ್ಕಾರ ಇದೀಗ ಕ್ಷಿಪಣಿ ದಾಳಿ ನಡೆಸಿದೆ. ಪಾಕ್ ಬುಡವೇ ಅಲ್ಲಾಡಿ ಹೋಗಿದೆ.
ಮೋದಿಯ ಬಳಿ ಹೋಗಿ ಹೇಳು ಅಂದಿದ್ದವರನ್ನು ‘ಆಪರೇಷನ್ ಸಿಂಧೂರ್’ ಅಡಿಯಲ್ಲಿ ಮಿಲಿಟರಿ ದಾಳಿಗಳನ್ನು ನಡೆಸಿ ಛಿದ್ರಗೊಳಿಸಲಾಗಿದೆ. ಭಾರತದ ಈ ದಾಳಿಯಲ್ಲಿ ಭಯೋತ್ಪಾದಕ ಅಡಗುತಾಣಗಳನ್ನು ಗುರಿಯಾಗಿಸಿಕೊಂಡಿದೆ. ಇದರಲ್ಲಿ, ಪಿಒಕೆ ಮತ್ತು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಭಯೋತ್ಪಾದಕ ಉಡಾವಣಾ ಪ್ಯಾಡ್‌ಗಳನ್ನು ಗುರಿಯಾಗಿಸಿಕೊಂಡಿದ್ದು, 70 ಕ್ಕೂ ಹೆಚ್ಚು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.