ಭಾರತಕ್ಕೆ ಕೊನೆಗೂ ಎಂಟ್ರಿ ಕೊಟ್ಟ ಟೆಸ್ಲಾ: ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಶೋ ರೂಮ್ ಓಪನ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಎಲಾನ್ ಮಸ್ಕ್ ಮಾಲೀಕತ್ವದ ಟೆಸ್ಲಾ ಎಲೆಕ್ಟ್ರಿಕ್ ಕಾರ್ ಭಾರತಕ್ಕೆ ಕೊನೆಗೂ ಎಂಟ್ರಿ ಕೊಟ್ಟಿದೆ. ದೇಶದ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಇಂದು ಟೆಸ್ಲಾ ಎಲೆಕ್ಟ್ರಿಕ್ ಕಾರ್ ಶೋ ರೂಮ್ ಉದ್ಘಾಟನೆಯಾಗಿದೆ.

ಇಂದಿನಿಂದಲೇ ಕಾರ್ ಪ್ರಿಯರು ಟೆಸ್ಲಾ ಎಲೆಕ್ಟ್ರಿಕ್ ಕಾರುಗಳನ್ನು ಬುಕ್ ಮಾಡಿ ಖರೀದಿ ಮಾಡಬಹುದು. ದೆಹಲಿ ಮತ್ತು ಮುಂಬೈನಲ್ಲಿ ಟೆಸ್ಲಾ ಎಲೆಕ್ಟ್ರಿಕ್ ಕಾರ್ ಶೋ ರೂಮ್ ತೆರೆಯಲು ಟೆಸ್ಲಾ ಕಂಪನಿಯು ನಿರ್ಧರಿಸಿದೆ.

ಭಾರತದಲ್ಲಿ ಪ್ರಾರಂಭದಲ್ಲಿ ಟೆಸ್ಲಾ ಮಾಡೆಲ್ ವೈ ಎಲೆಕ್ಟ್ರಿಕ್ ಕಾರುಗಳನ್ನು ಟೆಸ್ಲಾ ಗ್ರಾಹಕರಿಗೆ ಮಾರಾಟ ಮಾಡಲಿದೆ. ಟೆಸ್ಲಾ ವೈ ಬ್ರ್ಯಾಂಡ್ ಕಾರ್, ರೀಯರ್ ವೀಲ್ಹ್ ಡ್ರೈವ್ ಮತ್ತು ಲಾಂಗ್ ರೇಂಜ್ ರೀಯಲ್ ವೀಲ್ಹ್ ಡ್ರೈವ್ ವೇರಿಯೆಂಟ್​ಗಳನ್ನು ಭಾರತದಲ್ಲಿ ಈಗ ಮಾರಾಟ ಮಾಡಲಾಗುತ್ತಿದೆ. ರೀಯಲ್ ವೀಲ್ಹ್ ಡ್ರೈವ್ ವೇರಿಯೆಂಟ್ ಕಾರುಗಳು ಪ್ರಾರಂಭಿಕ 59.89 ಲಕ್ಷ ರೂಪಾಯಿ. ಲಾಂಗ್ ರೇಂಜ್ ವರ್ಸನ್ ಕಾರುಗಳ ಬೆಲೆ 67.89 ಲಕ್ಷ ರೂಪಾಯಿ.

Tesla finally rolls into India with first showroom in Mumbai: Are there takers for Elon Musk’s EV car?ಇನ್ನೂ ಟೆಸ್ಲಾ ಮಾಡೆಲ್ ವೈ ಕಾರುಗಳ ಆನ್ ರೋಡ್ ಬೆಲೆ ರೀಯರ್ ವೀಲ್ಹ್ ಡ್ರೈವ್ ವೇರಿಯೆಂಟ್​ಗೆ 61.07 ಲಕ್ಷ ರೂಪಾಯಿ ಆಗಲಿದೆ. ಇನ್ನೂ ಲಾಂಗ್ ರೇಂಜ್ ವರ್ಷನ್​ಗೆ 69.15 ಲಕ್ಷ ರೂಪಾಯಿ ಆಗಲಿದೆ. ಇದರಲ್ಲಿ ಆಡಳಿತಾತ್ಮಕ ಹಾಗೂ ಸರ್ವೀಸ್ ಶುಲ್ಕವೂ ಸೇರಿದೆ. ಟೆಸ್ಲಾ ಮಾಡೆಲ್ ವೈ ಕಾರ್ ಖರೀದಿಗೆ ಶೇ.18 ರಷ್ಟು ಜಿಎಸ್‌ಟಿ ವಿಧಿಸಲಾಗುತ್ತೆ ಎಂದು ಕಂಪನಿಯ ವೆಬ್ ಸೈಟ್ ಹೇಳಿದೆ.

ಟೆಸ್ಲಾ ಮಾಡೆಲ್ ವೈ, ಅಮೆರಿಕಾದಲ್ಲಿ 44,990 ಡಾಲರ್ ಬೆಲೆ ಹೊಂದಿದೆ. ಅಂದರೇ, ಭಾರತದಲ್ಲಿ 38.63 ಲಕ್ಷ ರೂಪಾಯಿ ಆಗುತ್ತೆ. ಚೀನಾದಲ್ಲಿ 31.57 ಲಕ್ಷ ರೂಪಾಯಿ ಆಗುತ್ತೆ. ಜರ್ಮನ್ ನಲ್ಲಿ 46.09 ಲಕ್ಷ ರೂಪಾಯಿ ಆಗುತ್ತೆ. ಆದರೇ, ಭಾರತದಲ್ಲಿ ವಿದೇಶದಲ್ಲಿ ಕಾರು ಉತ್ಪಾದನೆ ಮಾಡಿ, ಭಾರತಕ್ಕೆ ಅಮದು ಮಾಡಿಕೊಂಡು ಅವುಗಳ ಸಾಗಣೆ ವೆಚ್ಚವೂ ಸೇರಿ ಟೆಸ್ಲಾ ಮಾಡೆಲ್ ವೈ ಬೆಲೆ 59.89 ಲಕ್ಷ ರೂಪಾಯಿಗೆ ಏರಿಕೆಯಾಗಿದೆ.

ಟೆಸ್ಲಾ ಮಾಡೆಲ್ ವೈ ಕಾರು ಭಾರತದಲ್ಲಿ 7 ಬಣ್ಣಗಳಲ್ಲಿ ಲಭ್ಯವಿದೆ. 2 ಇಂಟೀರಿಯರ್ ಟ್ರಿಮ್ಸ್​ಗಳಲ್ಲಿ ಮಾರಾಟಕ್ಕೆ ಲಭ್ಯ ಇದೆ. ಕಾರ್ ನಲ್ಲಿ 15.4 ಇಂಚು ಇನ್ಪೋಟೈನ್ ಮೆಂಟ್ ಡಿಸ್​​ಪ್ಲೇ, 7 ಇಂಚು ರೀರ್ ಸ್ಕ್ರೀನ್, ಪವರ್ ಅಡ್ಜಸ್ಟಬಲ್ ಫ್ರಂಟ್ ಸೀಟ್​ಗಳು, ಡ್ಯೂಯಲ್ ಜೋನ್ ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಫಿಕ್ಸಡ್ ಗ್ಲಾಸ್ ರೂಫ್, ಪವರ್ ರೀಯರ್ ಲಿಫ್ಟ್ ಗೇಟ್ ಹಾಗೂ 19 ಇಂಚು ಕ್ರಾಸ್ ಪ್ಲೋ ವೀಲ್ಹ್ ಗಳಲ್ಲಿ ಟೆಸ್ಲಾ ಮಾಡೆಲ್ ವೈ ಕಾರ್ ಮಾರಾಟವಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!