ಹೊಸದಿಗಂತ ಡಿಜಿಟಲ್ ಡೆಸ್ಕ್:
ಜುಲೈ 20 ರಿಂದ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಟೆಸ್ಟ್ ಸರಣಿಗೆ ಶುಭ್‌ಮಾನ್ ಗಿಲ್ ನಾಯಕತ್ವದ ತಂಡವನ್ನು BCCI ಘೋಷಣೆ ಮಾಡಿದೆ. ಆದ್ರೆ, ಇಡೀ ತಂಡದಲ್ಲಿ ಅನುಭವಿ ಆಟಗಾರರ ಕೊರತೆ ಇರುವುದು ಎದ್ದು ಕಾಣಿಸುತ್ತಿದೆ.
ಜಸ್ಪ್ರಿತ್ ಬುಮ್ರಾ, ಕೆಎಲ್ ರಾಹುಲ್ ಹಾಗೂ ಜಡೇಜಾ ಹೊರತುಪಡಿಸಿ ಉಳಿದ ಯಾವುದೇ ಆಟಗಾರರಿಗೆ ದೊಡ್ಡ ಮಟ್ಟದ ಅನುಭವ ಇಲ್ಲ.
ಅನುಭವಿ ಆಟಗಾರರ ನಿವೃತ್ತಿ ಹಿನ್ನೆಲೆಯಲ್ಲಿ ಈ ಬಾರಿಯ ಇಂಗ್ಲೆಂಡ್ ವಿರುದ್ಧದ ಸರಣಿಗೆ ಕೆಲವು ಹಿರಿಯ ಆಟಗಾರರಿಗೆ ಅವಕಾಶ ನೀಡುವ ಸಾಧ್ಯತೆ ಇದೆ ಎಂದೇ ನಿರೀಕ್ಷಿಸಲಾಗಿತ್ತು. ಆದ್ರೆ, ನಿರೀಕ್ಷೆ ಕೊನೆಗೂ ಹುಸಿಯಾಗಿದ್ದು, ಅಜಿಂಕ್ಯಾ ರಹಾನೆ, ಚೇತೇಶ್ವರ್ ಪೂಜಾರ ಹಾಗೂ ಮೊಹಮ್ಮದ್ ಶಮಿ ಅಂತಹ ಅನುಭವಿ ಆಟಗಾರರನ್ನು ಇಂಗ್ಲೆಂಡ್ ಸರಣಿಗೆ ನಿರ್ಲಕ್ಷಿಸಲಾಗಿದೆ.
ಮೊಹಮ್ಮದ್ ಶಮಿ: ಇದುವರೆಗೂ 64 ಪಂದ್ಯಗಳ 122 ಇನ್ನಿಂಗ್ಸ್‌ಗಳಲ್ಲಿ ಟೀಂ ಇಂಡಿಯಾ ಪರ ಆಡಿದ್ದು ಇದರಲ್ಲಿ 229 ವಿಕೆಟ್ ಪಡೆದು ಮಿಂಚಿದ್ದಾರೆ.
ಅಜಿಂಕ್ಯಾ ರಹಾನೆ: ಇದುವರೆಗೂ ಅವರು 85 ಪಂದ್ಯಗಳ 144 ಇನ್ನಿಂಗ್ಸ್‌ಗಳಲ್ಲಿ ಟೀಮ್ ಇಂಡಿಯಾ ಪರ ಬ್ಯಾಟ್ ಬೀಸಿದ್ದು, ಇದರಲ್ಲಿ 39ರ ಸರಾಸರಿಯಲ್ಲಿ 5077 ರನ್ ಕಲೆಹಾಕಿದ್ದಾರೆ.
ಚೇತೇಶ್ವರ ಪೂಜಾರ: ಇದುವರೆಗೂ 103 ಟೆಸ್ಟ್ ಪಂದ್ಯಗಳ 176 ಇನ್ನಿಂಗ್ಸ್‌ಗಳಲ್ಲಿ 44ರ ಸರಾಸರಿಯಲ್ಲಿ 7195 ರನ್ ಕಲೆಹಾಕಿದ್ದಾರೆ. ಇದರಲ್ಲಿ 19 ಶತಕ ಹಾಗೂ 35 ಅರ್ಧಶತಕಗಳು ಸೇರಿವೆ.