ಹೊಸದಿಗಂತ ಡಿಜಿಟಲ್ ಡೆಸ್ಕ್:
ಥೈಲ್ಯಾಂಡ್ ಮತ್ತು ಕಾಂಬೋಡಿಯಾ ಗಡಿ ಘರ್ಷಣೆ ಪರಿಹರಿಸಲು ಮಧ್ಯರಾತ್ರಿಯಿಂದ ತಕ್ಷಣ ಮತ್ತು ಬೇಷರತ್ತಾದ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ ಎಂದು ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ ಅವರು ಸೋಮವಾರ ಹೇಳಿದ್ದಾರೆ.
ಆಸಿಯಾನ್ ಪ್ರಾದೇಶಿಕ ಬಣದ ಮುಖ್ಯಸ್ಥರಾಗಿ ಮಾತುಕತೆಯ ಅಧ್ಯಕ್ಷತೆ ವಹಿಸಿದ್ದ ಅನ್ವರ್, ಸಾಮಾನ್ಯ ಸ್ಥಿತಿಗೆ ಮರಳಲು ಕ್ರಮ ತೆಗೆದುಕೊಳ್ಳಲು ಎರಡೂ ಕಡೆಯವರು ಒಪ್ಪಿದ್ದಾರೆ ಎಂದು ತಿಳಿಸಿದರು.
ಕಾಂಬೋಡಿಯಾ ಪ್ರಧಾನಿ ಹುನ್ ಮಾನೆಟ್ ಮತ್ತು ಥಾಯ್ ಹಂಗಾಮಿ ಪ್ರಧಾನಿ ಫುಮ್ತಾಮ್ ವೆಚಾಯಾಚೈ ಜುಲೈ 28 ರ ಮಧ್ಯರಾತ್ರಿಯಿಂದ ಜಾರಿಗೆ ಬರುವಂತೆ ತಕ್ಷಣ ಮತ್ತು ಬೇಷರತ್ತಾದ ಕದನ ವಿರಾಮಕ್ಕೆ” ಒಪ್ಪಿಕೊಂಡಿದ್ದಾರೆ ಎಂದು ಅನ್ವರ್ ಅವರು ಜಂಟಿ ಪ್ರಕಟಣೆಯನ್ನು ಹೇಳಿದ್ದಾರೆ.