Monday, January 12, 2026

ಭಯಂಕರ ಪ್ರವಾಹಕ್ಕೆ ತತ್ತರಿಸಿದ ಥೈಲ್ಯಾಂಡ್‌: ಭೂಕುಸಿತದ ಭೀಕರ ಹೊಡೆತ, 145 ಜನರ ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಕ್ಷಿಣ ಏಷ್ಯಾದಲ್ಲಿ ಮತ್ತೆ ಪ್ರಕೃತಿ ತನ್ನ ರೌದ್ರ ರೂಪ ತೋರಿಸಿದ್ದು, ಥೈಲ್ಯಾಂಡ್‌ನಲ್ಲಿ ನಿರಂತರ ಮಳೆ, ಪ್ರವಾಹ ಮತ್ತು ಭೂಕುಸಿತಗಳು ಜನಜೀವನವನ್ನು ಸಂಪೂರ್ಣವಾಗಿ ಅಸ್ತವ್ಯಸ್ಥ ಮಾಡಿದೆ. ಕಳೆದ ಕೆಲ ದಿನಗಳಲ್ಲಿ ದೇಶದ ಹಲವು ಭಾಗಗಳಲ್ಲಿ ಸಂಭವಿಸಿದ ಅವಾಂತರಗಳಿಂದ ಸಾವಿನ ಸಂಖ್ಯೆ 145ಕ್ಕೆ ಏರಿಕೆಯಾಗಿದೆ. ಇದರಲ್ಲಿಯೇ ಸಾಂಗ್ಖ್ಲಾ ಪ್ರಾಂತ್ಯದಲ್ಲಿ ಮಾತ್ರ 110 ಜನರು ಮೃತಪಟ್ಟಿರುವುದು ಪರಿಸ್ಥಿತಿಯ ತೀವ್ರತೆಯನ್ನು ಸ್ಪಷ್ಟಪಡಿಸುತ್ತದೆ. ಈ ವಿಕೋಪದಿಂದ ಸುಮಾರು 15 ಲಕ್ಷ ಮನೆಗಳು ನೀರಿನಲ್ಲಿ ಮುಳುಗಿದ್ದು, 36 ಲಕ್ಷಕ್ಕಿಂತ ಹೆಚ್ಚಿನ ಜನರು ನೇರವಾಗಿ ಹಾನಿಗೊಳಗಾಗಿದ್ದಾರೆ.

ಪ್ರವಾಹದ ಹೊಡೆತವು ಈಗಾಗಲೇ ಆರ್ಥಿಕ ಸಂಕಷ್ಟ, ಪ್ರವಾಸೋದ್ಯಮದ ಕುಸಿತ ಮತ್ತು ಗಡಿ ಉದ್ವಿಗ್ನತೆಯಿಂದ ಒತ್ತಡದಲ್ಲಿದ್ದ ದೇಶದ ಮೇಲೆ ಮತ್ತೊಂದು ದೊಡ್ಡ ಹೊಡೆತವಾಗಿದೆ. ಸರ್ಕಾರದ ನಿರ್ಲಕ್ಷ್ಯ ಮತ್ತು ತಡವಾದ ಕ್ರಮಗಳ ವಿರುದ್ಧ ಜನರ ಆಕ್ರೋಶ ಮತ್ತಷ್ಟು ತೀವ್ರಗೊಂಡಿದೆ. ಈ ನಡುವೆ ಪ್ರಧಾನಿ ಸಾಂಗ್ಖ್ಲಾ ಪ್ರಾಂತ್ಯದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿ, ತ್ವರಿತ ರಕ್ಷಣಾ ಕಾರ್ಯಾಚರಣೆ ಮತ್ತು ಪರಿಹಾರ ಕಾರ್ಯಗಳಿಗೆ ವಿಶೇಷ ಕಾನೂನುಗಳನ್ನು ಜಾರಿಗೆ ತಂದಿದ್ದಾರೆ.

Related articles

Comments

ಇತರರಿಗೂ ಹಂಚಿ

Latest articles

Newsletter

error: Content is protected !!