‘ಇಸ್ರೇಲ್‌ನಿಂದ ನನ್ನನ್ನು ರಕ್ಷಿಸಿದ್ದಕ್ಕೆ ನಿಮಗೆ ಹೃತ್ಪೂರ್ವಕ ಧನ್ಯವಾದಗಳು ಮೋದಿಜೀ’

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ನಟಿ ನುಶ್ರತ್ ಭರೂಚಾ ಕಾರ್ಯಕ್ರಮವೊಂದರಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿಯಾಗ ಹಮಾಸ್ ಭಯೋತ್ಪಾದಕರ ದಾಳಿಯಲ್ಲಿ ಇಸ್ರೇಲ್‌ನಿಂದ ರಕ್ಷಿಸಿದ್ದಕ್ಕೆ ಮೋದಿ ಅವರಿಗೆ ಧನ್ಯವಾದ ತಿಳಿಸಿದ್ದಾರೆ.

ಇಸ್ರೇಲ್‌ನಲ್ಲಿ ಸಿಲುಕಿಕೊಂಡಿದ್ದ ಸಂದರ್ಭದಲ್ಲಿ ನನ್ನನ್ನು ಸೇರಿ ಇನ್ನುಳಿದ ಭಾರತೀಯರನ್ನು ಕರೆತರಲು ನಿಮ್ಮ ತಂಡ ಮತ್ತು ಸರ್ಕಾರ ಕೈಗೊಂಡ ಕ್ರಮಕ್ಕಾಗಿ ಧನ್ಯವಾದಗಳು. ಮೋದಿಜೀ ಅವರೇ ನಿಮಗೆ ವೈಯಕ್ತಿಕವಾಗಿ ಧನ್ಯವಾದ ಹೇಳಲು ನನಗೆ ಅದ್ಭುತ ಸೌಭಾಗ್ಯ ಸಿಕ್ಕಿದೆ. ನಿಮ್ಮನ್ನು ಭೇಟಿಯಾಗಿ ಧನ್ಯಳಾಗಿದ್ದೇನೆ.” ಎಂದು ನಟಿ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಇಸ್ರೇಲ್‌ ಮತ್ತು ಉಗ್ರರ ಯುದ್ಧದ ಕಾರಣದಿಂದ ಅಲ್ಲಿನ ಜನ ಜೀವನ ಅಸ್ತವ್ಯಸ್ತವಾಗಿತ್ತು. ಆಗ ನಟಿ ಕೂಡ ಇಸ್ರೇಲ್‌ನಲ್ಲಿ ಸಿಲುಕಿಕೊಂಡಿದ್ದರು. ಭಾರತದ ಶ್ರಮದ ಫಲವಾಗಿ ಸುರಕ್ಷಿತವಾಗಿ ಅವರು ಭಾರತಕ್ಕೆ ಮರಳಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!