ಪರ್ವೇಜ್ ಮುಷರಫ್ ಅನ್ನು ಶಾಂತಿದೂತ ಎಂದ ತರೂರ್: ಕಾಂಗ್ರೆಸ್ ವಿರುದ್ಧ ಬಿಜೆಪಿ ಗರಂ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌   

ಪಾಕ್ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ (Pervez Musharraf) ನಿಧನಕ್ಕೆ ಕಾಂಗ್ರೆಸ್ ನಾಯಕ ಶಶಿ ತರೂರ್ (Shashi Tharoor) ಸಂತಾಪ ವ್ಯಕ್ತಪಡಿಸಿದ್ದು, ಇದೀಗ ಟೀಕೆಗೆ ಕಾರಣವಾಗಿದೆ.

ಮುಷರಫ್ ಒಮ್ಮೆ ಭಾರತದ ವೈರಿಯಾಗಿದ್ದರು ಆದರೆ ಅವರು 2002 ಮತ್ತು 2007 ರ ನಡುವೆ ಶಾಂತಿಗಾಗಿ ನಿಜವಾದ ಶಕ್ತಿಯಾದರು. “ನಾನು ಆ ದಿನಗಳಲ್ಲಿ ಯುಎನ್‌ನಲ್ಲಿ ಅವರನ್ನು ವಾರ್ಷಿಕ ಸಭೆಯಲ್ಲಿ ಭೇಟಿಯಾಗಿದ್ದೇನೆ ಮತ್ತು ಅವರ ಕಾರ್ಯತಂತ್ರದಲ್ಲಿ ಚುರುಕು, ತೊಡಗಿಸಿಕೊಳ್ಳುವಿಕೆ ಮತ್ತು ಯೋಚನೆಯಲ್ಲಿವ ಸ್ಪಷ್ಟತೆಯನ್ನು ಕಂಡುಕೊಂಡಿದ್ದೇನೆ.. RIP ಎಂದು ಶಶಿ ತರೂರ್ ಟ್ವೀಟ್ ಮಾಡಿದ್ದಾರೆ.

ಸಂದೇಶದಲ್ಲಿ ವೈರಿಯಾಗಿದ್ದರೂ ಶಾಂತಿಗಾಗಿ ನಿಜವಾದ ಶಕ್ತಿಯಾಗಿದ್ದ ವ್ಯಕ್ತಿ ಎಂದು ಬಣ್ಣಿಸಿದ್ದು, ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನವಾಲಾ (Shehzad Poonawalla), ಒಸಾಮಾ ಬಿನ್ ಲಾಡೆನ್ ಅವರನ್ನು ಹೊಗಳಿದ ವ್ಯಕ್ತಿಯಲ್ಲಿ ಶಾಂತಿಯನ್ನು ಕಂಡುಕೊಂಡಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಬಾಲಕೋಟ್ ಬಗ್ಗೆ ಕಾಂಗ್ರೆಸ್, ತನ್ನದೇ ಆದ ಸೇನಾ ಮುಖ್ಯಸ್ಥರನ್ನು ‘ಸಡಕ್ ಕಾ ಗುಂಡಾ’ ಎಂದು ಕರೆದಿತ್ತು. ಆದರೆ ಮುಷರಫ್ ಅವರನ್ನು ಶ್ಲಾಘಿಸುತ್ತದೆ ಎಂದು ಬಿಜೆಪಿ ನಾಯಕ ಹೇಳಿದ್ದಾರೆ.

ಅಮಿಲಾಯ್ಡೋಸಿಸ್ನಿಂದ ಬಳಲುತ್ತಿದ್ದ ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ 79 ನೇ ವಯಸ್ಸಿನಲ್ಲಿ ದುಬೈ ಆಸ್ಪತ್ರೆಯಲ್ಲಿ ಭಾನುವಾರ ನಿಧನರಾದರು.

ಒಸಾಮಾ ಬಿನ್ ಲಾಡೆನ್ ಮತ್ತು ತಾಲಿಬಾನ್​​ನ್ನು ಹೊಗಳಿದ ಪರ್ವೇಜ್ ಮುಷರಫ್ ಅವರು ರಾಹುಲ್ ಗಾಂಧಿಯವರನ್ನೂ ಹಾಡಿ ಹೊಗಳಿದ್ದರು. ಅವರನ್ನು ಸಂಭಾವಿತ ಎಂದು ಕರೆದರು ಮತ್ತು ಅವರಿಗೆ ತಮ್ಮ ಬೆಂಬಲವನ್ನು ವಾಗ್ದಾನ ಮಾಡಿದರು. ಬಹುಶಃ ಇದೇ ಕಾರಣಕ್ಕಾಗಿಯೇ ಶಶಿ ತರೂರ್ ಕಾರ್ಗಿಲ್‌ನ ವಾಸ್ತುಶಿಲ್ಪಿ ಮತ್ತು ಭಯೋತ್ಪಾದನೆಯ ಬೆಂಬಲಿಗನನ್ನು ಶ್ಲಾಘಿಸುತ್ತಿದ್ದಾರೆ ಎಂದು ಶೆಹಜಾದ್ ಪ್ರತಿಕ್ರಿಯಿಸಿದ್ದಾರೆ.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!